Latest News

About KCF

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಕೊಲ್ಲಿ ರಾಷ್ಟ್ರದಲ್ಲಿ ಜನ್ಮ ತಾಳಿ ಮಲೇಷ್ಯಾ, ಲಂಡನ್ ರಾಷ್ಟ್ರಗಳಲ್ಲಿ ತನ್ನ ಶೈಕ್ಷಣಿಕ ಕ್ರಾಂತಿಯನ್ನು ಮುಂದುವರಿಸುತ್ತಿದೆ. ವಿದೇಶ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಬಲು ದೊಡ್ಡ ನೆಟ್ವರ್ಕ್ ಆಗಿ ಕೆ.ಸಿ.ಎಫ್ ಕಾರ್ಯಾಚರಿಸುತ್ತಿದೆ. ಶೈಕ್ಷಣಿಕ ಕ್ರಾಂತಿಯ ಮೂಲಕ ಊರಿನ ಬಡ ನಿರ್ಗತಿಕರ ಪಾಲಿನ ಆಶಾಕಿರಣವೂ ಹೌದು. ಕರ್ನಾಟಕದ ಭಾಷಾ, ಸೊಬಗು, ಸೌಹಾರ್ದತೆ ಮತ್ತು ಸುಂದರ ಸಂಸ್ಕೃತಿಯನ್ನು ಸಾರುವ ಕೆ.ಸಿ.ಎಫ್ ಕೊಲ್ಲಿ ಮತ್ತು ಯುರೋಪ್ ರಾಷ್ಟ್ರಗಳಲ್ಲಿ 15,000 ಕ್ಕಿಂತಲೂ ಮಿಕ್ಕ ಎನ್.ಆರ್.ಐ ಸದಸ್ಯರನ್ನು ಹೊಂದಿದೆ. ಯುವ ಮನಸ್ಸುಗಳಲ್ಲಿ ಧಾರ್ಮಿಕ ಜಾಗೃತಿಯನ್ನುಮೂಡಿಸುವ ಮೂಲಕ ಸಮಾಜದ ಬದಲಾವಣೆಯನ್ನು ಬಯಸಿರುವ ಕೆ.ಸಿ.ಎಫ್ ವಿದೇಶ ರಾಷ್ಟ್ರಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಒಟ್ಟುಗೂಡುವ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯನ್ನು ಒದಗಿಸಿಗೊಡುತ್ತಿದೆ.ಮಾಜಿಕ ವೇದಿಕೆಯಾಗಿ. ಕೆಸಿಎಫ್ ಅನ್ನು 2013 ರಲ್ಲಿ ಸ್ಥಾಪಿಸಲಾಯಿತು...

ಉದ್ದೇಶ

ಯುವಸಮೂಹವನ್ನು ಸಹಿಷ್ಣುತೆಯ ಪ್ರತಿಪಾಧಕರಾಗಿ ಮಾನವೀಯ ಮೌಲ್ಯಗಳನ್ನು ಕಟ್ಟಿ ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ಕೆ.ಸಿ.ಎಫ್ ನಿರ್ವಹಿಸುತ್ತಿದೆ. ಸಮಾಜ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಮುನ್ನಡೆಯುತ್ತಿರುವ ಕೆ.ಸಿ.ಎಫ್ ನ ಕಾರ್ಯವೈಖರಿಗಳು ಒಂದು ಉತ್ತಮ ಸಮೂಹವನ್ನು ಸೃಷ್ಟಿಸುವ ಕಡೆಗೆ ಆತ್ಮವಿಶ್ವಾಸದೊಂದಿಂದ ಹೆಜ್ಜೆಯಿಡುತ್ತಿದೆ. ಕರ್ನಾಟಕದ ನೆಲ, ಜಲ, ಸಂಸ್ಕೃತಿಯನ್ನು ವಿದೇಶ ರಾಷ್ಟ್ರಗಳಾದ್ಯಂತ ಪರಿಚಯಿಸುವ ಮೂಲಕ ಅನಿವಾಸಿ ಕನ್ನಡಿಗರ ಭಾಷಾ ಸಾಹಿತ್ಯವಕ್ಕೂ ಹೆಚ್ಚಿನ ಮಹತ್ವವನ್ನು ಕಲ್ಪಿಸುತ್ತಿದೆ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮೊದಲಾದ ವಿಶೇಷ ರಾಷ್ಟ್ರೀಯ ದಿನಗಳನ್ನು ನೆನಪಿಸುವ ಕೆ.ಸಿ.ಎಫ್, ಕಲಾ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಡುವ ಮೂಲಕ ದೇಶಪ್ರೇಮದ ಸೌಂದರ್ಯವನ್ನು ಸವಿಯುತ್ತಿದೆ. ಕಾನೂನುಬದ್ದವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಮೊತ್ತಮೊದಲನೆಯದಾಗಿ ಗಲ್ಫ್ ಇಶಾರ ಹೆಸರಿನಲ್ಲಿ ಪತ್ರಿಕೆಯನ್ನು ಹೊರತಂದು ಕನ್ನಡ ಭಾಷಾಭಿಮಾನವನ್ನು ಎತ್ತಿಹಿಡಿದ ಕೀರ್ತಿಯನ್ನು ಕೆಸಿಎಫ್ ಮಡಿಲಿಗೇರಿಸಿಕೊಂಡಿದೆ. ಮಾಸಿಕವಾಗಿ ಬಿಡುಗಡೆಯಾಗುತ್ತಿರುವ ಸಾವಿರಾರು ಗಲ್ಫ್ ಇಶಾರ ಪ್ರತಿಗಳು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಮನೆಬಾಗಿಲಿಗೆ ತಲುಪುತ್ತಿದೆ. ಶೈಕ್ಷಣಿಕ, ಸಾಮಾಜಿಕ ಮತ್ತು ಸಾಮುದಾಯಿಕ ಸೇವೆಗಳ ಮೂಲಕ ಕರ್ನಾಟಕದ ಅಭಿವೃದ್ಧಿ ಮತ್ತು ವಿದೇಶಗಳಲ್ಲಿ ಕನ್ನಡಿಗರ ಪ್ರಾಬಲ್ಯವನ್ನು ಹೆಚ್ಚಿಸಿ ಅದರ ಮೂಲಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶೆಕ್ಷಣಿಕ ಕ್ರಾಂತಿಯನ್ನು ನಡೆಸುವುದಾಗಿರುತ್ತದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಶೈಕ್ಷಣಿಕವಾಗಿ ಸಂಪೂರ್ಣವಾಗಿ ಹಿಂದುಳಿದಿದ್ದು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಇಹ್ಸಾನ್ ಯೋಜನೆಯ ಮೂಲಕ ಕೆ.ಸಿ.ಎಫ್ ಕಾರ್ಯಾಚರಿಸುತ್ತಿದೆ. ಅಲ್ಲಿಗೆ ಬೇಕಾದ ಮತ ಲೌಖಿಕ ಶಿಕ್ಷಣ ಕೇಂದ್ರಗಳನ್ನು ನಿರ್ಮಿಸಿ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಬಡ ನಿರ್ಗತಿಕರ ಪಾಲಿನ ಸಾಂತ್ವಾನದ ನೆರಳಾಗಿ, ಭರವಸೆಯ ಬೆಳಕಾಗಿ ಕೆ.ಸಿ.ಎಫ್ ತನ್ನ ಸೇವಾ ಮನೋಭಾವವನ್ನು ವಿಸ್ತರಿಸಿಕೊಂಡಿದೆ. ದುಡಿಮೆಯ ಆತ್ಮವಿಶ್ವಾಸದಲ್ಲಿ ವಿದೇಶಕ್ಕೆ ಕಾಲಿಟ್ಟ ಹಲವಾರು ಕನ್ನಡಿಗರು ನರಕಯಾತನೆ ಅನುಭವಿಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಅವರನ್ನು ಕಾನೂನಿನ ಸಹಾಯದೊಂದಿಗೆ ಸುರಕ್ಷಿತವಾಗಿ ಊರಿಗೆ ತಲುಪಿಸುವ ಸನ್ನದ್ಧ ತಂಡವು ಕೂಡ ಕೆ.ಸಿ.ಎಫ್ ಮೂಲಕ ನಡೆಯುತ್ತಿದೆ. ಇನ್ನಿತರ ಹಲವಾರು ಸೇವೆಗಳೊಂದಿಗೆ ಕೆ.ಸಿ.ಎಫ್ ಸಮಾಜದ ಬೆನ್ನೆಲುಬಾಗಿ ಕಾರ್ಯಾಚರಿಸುತ್ತಿದೆ.ಕರಿಸುವ ಕಾರ್ಯವನ್ನು ಸಂಘಟಿಸುವಲ್ಲಿ ಕೆಸಿಎಫ್ ಆಧಾರಿತ ಸಂಸ್ಥೆಯಾಗಿದೆ.

ಜಾಹಿರಾತು

Category Archive

Links