ದೆಹಲಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Click Me to Share on Whatsappಕೋಲ್ಕೋತಾ: ದೆಹಲಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶಾಹಿದ್ ಮಿನಾರ್ ಮೈದಾನದಲ್ಲಿ ಭಾನುವಾರ ನಡೆದ ಅಮಿತ್ ಷಾ ಅವರ ಸಭೆಗೂ ಮುನ್ನ ಗೋಲಿ ಮಾರೊ ಘೋಷಣೆ ಕೂಗಿರುವುದನ್ನು ಖಂಡಿಸಿದ ಅವರು, ಗುಜರಾತ್ ಮಾದರಿಯ ನರಮೇಧವನ್ನು ಪುನಾರವರ್ತಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
‘ಕೋಲ್ಕತಾ ಬೀದಿಗಳಲ್ಲಿ ಗೋಲಿ ಮಾರೊ ಘೋಷಣೆ ಕೂಗಿರುವುದನ್ನ ನಾನು ಖಂಡಿಸುತ್ತೇನೆ. ಇದು ಬಂಗಾಳವೇ ಹೊರತು ದೆಹಲಿ ಅಲ್ಲ. ಇದನ್ನು ನಾವು ಸಹಿಸುವುದಿಲ್ಲ. ಇಲ್ಲಿನ ಕಾನೂನು ತನ್ನದೇ ಆದ ಕರ್ತವ್ಯ ನಿರ್ವಹಿಸಲಿದೆ’ ಎಂದು ಮಮತಾ ಹೇಳಿದ್ದಾರೆ.