ಉಳ್ಳಾಲ:
Click Me to Share on Whatsappಉಳ್ಳಾಲ: ಮದುವೆ ಹಾಲ್ ನಲ್ಲಿ ನಡೆದ ಲಿಫ್ಟ್ ಅವಘಡದಲ್ಲಿ ತುಂಬೆ ಒಳವೂರು ನಿವಾಸಿ ಹಂಝ(45) ಮೃತಪಟ್ಟಿದ್ದಾರೆ.
ರವಿವಾರ ಮದುವೆ ಹಾಲ್ ಕ್ಯಾಟರಿಂಗ್ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದ ಹಂಝ ಅನ್ನದ ಪಾತ್ರೆಯನ್ಬು ಲಿಫ್ಟ್ ನಲ್ಲಿ ಕೊಂಡೊಯ್ಯುತ್ತಿದ್ದಾಗ ಲಿಫ್ಟ್ ತುಂಡಾಗಿ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದ ಹಂಝ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರತಿಭಟನೆ : ಮದುವೆ ಹಾಲ್ ನ ಮಾಲಕರ ಬೇಜಾವಾಬ್ದಾರಿ ಮತ್ತು ಲಿಫ್ಟ್ ದುರಸ್ತಿ ಮಾಡಿಸದೇ ಇರುವುದೇ ಅಪಘಾತಕ್ಕೆ ಕಾರಣ ಎಂದು ಜಮಾಯಿಸಿದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದು ಹಾಲ್ನ ಮಾಲಕರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೃತ ಹಂಝ ಮಂಗಳೂರಿನಲ್ಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ರಜಾ ಸಂದರ್ಭದಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸ ಮಾಡುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರಿಯರನ್ಬು ಅಗಲಿದ್ದಾರೆ.