ಸೌದಿ ಅರೇಬಿಯಾ
Click Me to Share on Whatsappಸೌದಿ ಅರೇಬಿಯಾ: ಮಾರ್ಚ್ ಒಂದರಿಂದ ಕರ್ನಾಟಕ ರಾಜ್ಯಾದ್ಯಂತ ಆರಂಭಗೊಂಡ “ಕರ್ನಾಟಕ ಮುಸ್ಲಿಂ ಜಮಾತ್” ಇದರ ಸದಸ್ಯತ್ವ ಅಭಿಯಾನದ ಅಂಗವಾಗಿ ಪವಿತ್ರ ಮಕ್ಕಾದ ಹರಂ ಶರೀಫ್ ನಲ್ಲಿ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು.
ಕೆಸಿಎಪ್ ಸೌದಿ ಅರೇಬಿಯಾ ರಾಷ್ಟ್ರೀಯ ನಾಯಕ ಮೂಸ ಹಾಜಿ ಕಿನ್ಯ ಅವರಿಂದ ಸದಸ್ಯತ್ವದ ಫಾರಮನ್ನು ಸ್ವೀಕರಿಸುವ ಮೂಲಕ SYS ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅಭಿಯಾನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಎಸ್.ವೈ.ಎಸ್. ಕರ್ನಾಟಕ ರಾಜ್ಯಾಧ್ಯಕ್ಷ ಉಸ್ಮಾನ್ ಸ’ಅದಿ ಪಟ್ಟೋರಿ, ಇಸಾಬಾ ಕಾರ್ಯದರ್ಶಿ ಉಮರ್ ಸಖಾಫಿ ಎಡಪ್ಪಾಲ್, ಕೆಸಿಎಫ್ ಮಕ್ಕಾ ಸೆಕ್ಟರ್ ಅಧ್ಯಕ್ಷ ಫಾರೂಖ್ ಹನೀಫಿ, ನಾಯಕರಾದ ಅಬ್ದುಲ್ ಹಮೀದ್ ಉಳ್ಳಾಲ್,ಖಲಂದರ್ ಶಾಫಿ ಅಸೈಗೋಳಿ,ಅಬ್ದುಲ್ಲ ಕಿನ್ಯ,ಖಾಲಿದ್ ಕಬಕ, ಎಸ್.ವೈ.ಎಸ್.ನಾಯಕರಾದ ಅಬ್ದುಲ್ ಅಝೀಝ್ ಹನೀಫಿ ಕಾಯಾರ್,ರಿಯಾಝ್ ಮದನಿ ಬಂಟ್ವಾಳ, ಸಿದ್ದೀಖ್ ಸ’ಅದಿ ಮಿತ್ತೂರು ಮುಂತಾದವರು ಪಾಲ್ಗೊಂಡರು.