KCF UAE
Click Me to Share on Whatsapp*ಅನಿವಾಸಿ ಭಾರತೀಯರನ್ನು ಕಡೆಗಣಿಸದಿರಲು ಕೆ .ಸಿ .ಎಫ್ . ಯು ಎ ಇ ರಾಷ್ಟ್ರೀಯ ಅಧ್ಯಕ್ಷರಿಂದ ಒತ್ತಾಯ *
ರಾಷ್ಟ್ರ ಮತ್ತು ಸಮಾಜದ ಆರ್ಥಿಕ ಬೆಳವಣಿಗೆಗೆ ಬೆನ್ನುಲುಬಾಗಿ ನಿಂತ ಅನಿವಾಸಿ ಭಾರತೀಯರು ಯಾವುದೇ ವಿಧದ ಸೌಲಭ್ಯಗಳು ಲಭಿಸದೆ ವಂಚಿತ ವಿಭಾಗವಾಗಿ ಮಾರ್ಪಟ್ಟಿದೆ .
ಭಾರತ ದೇಶದ ಪೌರರೆಂಬ ನೆಲೆಯಲ್ಲಿ ತನ್ನ ಹುಟ್ಟೂರಿಗೆ ಯಾವಾಗಲೊಮ್ಮೆ ಮರಳಬೇಕೆಂಬ ಮೂಲಭೂತ ಹಕ್ಕನ್ನು ವಿಶ್ವದ ವಿವಿಧ ಕಡೆಗಳಲ್ಲಿ ವಾಸಿಸುವ ಅನಿವಾಸಿ ಭಾರತೀಯರೀಗೂ ಸಿಗಲು ದೇಶದ ಆಡಳಿತ ವಿಭಾಗವು ಶ್ರಮಿಸಬೇಕೆಂದು ಕೇಳಿಕೊಳ್ಳುತ್ತೇವೆ.
ವಿವಿಧ ರಾಜ್ಯಕ್ಕೆ ಮರಳುವವರನ್ನು ಅವರ ಆರೋಗ್ಯ ವಿಚಾರಣೆ ತಪಾಸಣೆ ನಡೆಸಿ ಐಸೊಲೇಶನ್ ಅಥವಾ ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು .
ಸಾರ್ವಜನಿಕ ಕಟ್ಟಡಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಇನ್ನಿತರ ಶಾಲಾ ಕಾಲೇಜು ಕಟ್ಟಡಗಳನ್ನು ಅನಿವಾಸಿಗಳ ರೋಗ ಮುಕ್ತಿ ಹೊಂದುವ ತನಕ ತಾತ್ಕಾಲಿಕ ವಸತಿಗಳಾಗಿ ಮಾರ್ಪಡಿಸಲು, ಸರ್ಕಾರ ಧಾರ್ಮಿಕ ಮುಖಂಡರುಗಳ ಸಭೆ ನಡೆಸಿ ಬೇಕಾದ ವ್ಯವಸ್ಥೆ ಮಾಡಬೇಕಾಗಿದೆ.
ಗತಕಾಲಗಳಿಂದ ಅನಿವಾಸಿಗರ ಪರಿಶ್ರಮದಿಂದ ಬೆಳೆದು ಬಂದ ನಾಡಿನ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಋಣಾತ್ಮಕವಾಗಿ ಮನಗಂಡು, ಸ್ವಂತ ಅಸ್ತಿತ್ವದ ಭದ್ರತೆಗಾಗಿ ದುಡಿಯುವ ಅನಿವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಲು ಒಮ್ಮೆಯೂ ಹಿಂಜರಿಯಬಾರದು.
ಅನಿವಾಸಿಗರ ಈ ಬೇಡಿಕೆಯು ಖಂಡಿತವಾಗಿಯೂ ನ್ಯಾಯಯುತವಾಗಿದ್ದು ಅದನ್ನು ಈಡೇರಿಸುವವರೆಗೂ ನಿರಂತರವಾದ ಒತ್ತಡ ರಾಜಕೀಯ ಮತ್ತು ಸಾಮಾಜಿಕ ಗಣ್ಯರಲ್ಲಿ ಉಂಟಾಗಬಹುದೆಂದು ಆಶಾಭಾವನೆಯೊಂದಿಗೆ,
ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು (ಅಧ್ಯಕ್ಷರು KCF UAE ರಾಷ್ಟ್ರೀಯ ಸಮಿತಿ)