Latest News

ಕೋವಿಡ್-19 ಸೇವಾ ಚಟುವಟಿಕೆಯ ಮುಂಚೂಣಿಯಲ್ಲಿ ಕೆಸಿಎಫ್ ಯುಎಇ

User 13/04/2020-06:13:10am Technology

ಕೋವಿಡ್-19

ಕೋವಿಡ್-19 ಸೇವಾ ಚಟುವಟಿಕೆಯ ಮುಂಚೂಣಿಯಲ್ಲಿ ಕೆಸಿಎಫ್ ಯುಎಇ

ಕೋರೋಣ ಸಾಂಕ್ರಾಮಿಕವು ಸೃಷ್ಟಿಸಿರುವ ಸಂಕಷ್ಟದಿಂದಾಗಿ ಅನಿವಾಸಿ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಕೆ ಸಿ ಎಫ್ ಯು ಎ ಈ  ಕ್ಷೀಪ್ರವಾಗಿ ಸ್ಪಂಧಿಸುವ ಮೂಲಕ ಕನ್ನಡಿಗರೆಡೆಯಲ್ಲಿರುವ  ನೂರಾರು ಸಂದರ್ಶಕ ವೀಸಾದಲ್ಲಿರುವವರು, ಕೆಲಸ ಕಳೆದುಕೊಂಡು  ಸಮಸ್ಯೆಯಲ್ಲಿ ಸಿಲುಕಿದವರು, ಅರೋಗ್ಯ ವಿಮೆಯಿಲ್ಲದವರು, ಅನೀರಿಕ್ಷಿತವಾಗಿ ಪ್ರಯಾಣ ಮೊಟಕುಗೊಂಡವರು, ಸಂಪೂರ್ಣವಾಗಿ ನಿರ್ಬಂಧಕ್ಕೊಳಗಾದ ಕಟ್ಟಡದಲ್ಲಿ ಸಿಲುಕಿದವರಿಗೆ ಆಹಾರ ಅರೋಗ್ಯ , ಇನ್ನಿತರ ಅಗತ್ಯ ಕಾರ್ಯ ಸಮಸ್ಯೆಗಳನ್ನೂ ಗಮನಿಸಿ ಅವರ ಅವಶ್ಯತೆಗಳನ್ನು ಪೂರೈಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ.  ಈಗಾಗಲೇ
ದುಬೈ ಯಲ್ಲಿ 300 ,ಅಬುಧಾಬಿಯಲ್ಲಿ 200, ಶಾರ್ಜಾ ಅಜ್ಮಾನ್ 100 ಸೇರಿದಂತೆ ಸುಮಾರು 600 ಕ್ಕೂ ಮಿಕ್ಕ  ಅನಿವಾಸಿಗಳಿಗೆ ಒಂದು ತಿಂಗಳ ಮಟ್ಟಿಗೆ ಬೇಕಾದ ಆಹಾರ, ಔಷದ, ದಿನಸಿ, ಶುಚೀಕರಣ ಕಿಟ್ಟನ್ನು ವಿತರಿಸಲಾಗಿದೆ. 
ಹಾಗು ನಿರೀಕ್ಷೆಗಿಂತಲೂ ಮಿಗಿಲಾಗಿ ಪ್ರತಿ ದಿನ ನೂರಾರು ಕರೆಗಳು ಬರುತ್ತಿದ್ದು  ತಮ್ಮಿಂದಾಗುವಷ್ಟು ದಾನಿಗಳ ಸಹಕಾರ ದೊಂದಿಗೆ ಸ್ಪಂದಿಸುತ್ತಿದ್ದೇವೆ. 
ಇಂದಿನ ಅನಿರೀಕ್ಸಿತ ಸಂಕಷ್ಟದಲ್ಲಿ ಬೇಕಾದ ರೀತಿಯಲ್ಲಿ ಆಹಾರದ ಕಿಟ್ ಗಳನ್ನೂ ಕ್ರೊಡೀ ಕರಿಸುವುದು ಮಾತ್ರವಲ್ಲ ಅದನ್ನು ಲಾಕ್ ದೌನ್ ಪ್ರದೇಶದಲ್ಲಿ ಅರ್ಹರಿಗೆ ತಲುಪಿಸುವುದರಲ್ಲಿ KCF  ಸಾಂತ್ವನ ವಿಭಾಗದ ಸನ್ನದ್ಧ ಕಾರ್ಯಕರ್ತರ ತಂಡ ಬಹಳ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದೆ. 
ಸಾಧ್ಯವಿರುವವರು ತಮ್ಮಿಂದಾಗುವ ರೀತಿಯಲ್ಲಿ ಸಹಕಾರಗಳನ್ನು ನೀಡಬೇಕಾಗಿದೆ.

ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್, ಆಲ್ ಐನ್, ರಾಸಲ್ ಕೈಮ ಎಮಿರೇಟ್ಗಳಲ್ಲಿ ಸನ್ನದ್ಧ ಸ್ವಯಂ ಸೇವಕರ ದಂಡು ದಿನದ 24 ಗಂಟೆ ಕಾರ್ಯಪ್ರವರ್ತವಾಗಿದೆ. ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರಿದ್ದಲ್ಲಿ ಸಮೀಪದ ಕೆಸಿಎಫ್ ಘಟಕದ ಸಾಂತ್ವನ ವಿಭಾಗವನ್ನು ಸಂಪರ್ಕಿಸಬೇಕಾಗಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಗಲ್ಫ್ ನಲ್ಲಿ ಬಹುತೇಕ ಜನರು ಉದ್ಯೋಗ ನಷ್ಟಗೊಳ್ಳುವ ಭೀತಿ ಎದುರಾಗಿದ್ದು ಮತ್ತು ಗಲ್ಫ್ ನಲ್ಲಿ ರುವ ಹಲವು ಅನಿವಾಸಿ ಕನ್ನಡಿಗರು ಯಾವುದೇ ಕ್ಷಣದಲ್ಲಿ ತಾಯಿನಾಡಿಗೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. (ಇಲ್ಲಿ ಕೆಲವರಿಗೆ ಒಂದು ಸಂಶಯವಿದೆ ಹಿಂತಿರುಗಿ ಬರುವವರೆಲ್ಲರೂ ಕೊರೋನಾ ಪೀಡಿತರು ಎಂದು, ಇದು ತಪ್ಪು ಗ್ರಹಿಕೆ, ಹಿಂತಿರುಗಿ ಬರುವವರೆಲ್ಲರೂ ಸೋಂಕಿತರಲ್ಲ) ತಾಯ್ನಾಡಿಗೆ ಹಿಂತಿರುಗಿ ಬಂದವರು ಭಾರತ ಸರಕಾರದ ಸರಕಾರದ ನಿಯಮದಂತೆ ಪ್ರತ್ಯೇಕವಾಗಿ 15 ದಿನ (ಇತರರಿಗೆ ತೊಂದರೆಯಾಗದಂತೆ ಮನೆಯವರನ್ನೆಲ್ಲ ಬಿಟ್ಟು ) ಇರಲು ಕ್ವಾರಂಟೈನ್ ಸೌಕರ್ಯಕ್ಕಾಗಿ ಬೇಕಾದ ವಸತಿ ವ್ಯವಸ್ಥೆಯನ್ನು ಮಾಡುವುದಾಗಿ ಧಕ್ಷಿಣ ಕನ್ನಡ ಹಾಗು ಕೊಡಗು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ದಾರುಲ್ ಇರ್ಷಾದ್ ಮಾಣಿ, ಅಲ್ ಮದೀನಾ  ಮಂಜನಾಡಿ, ಮರ್ಕಝುಲ್ ಹಿದಾಯ ಕೊಟ್ಟಮುಡಿ, ಮೂಳೂರು ಮರ್ಕಜ್ ತಹಲೀಮುಲ್ ಇಹ್ಸಾನ್,
ಅನ್ವಾರುಲ್ ಹುದಾ ವಿರಾಜಪೇಟೆ, ದಾರುಲ್ ಆಶ್ ಅರಿಯ್ಯಾ, ತಲಕ್ಕಿ ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸೇರಿದಂತೆ ಮಲೆನಾಡು ಮತ್ತು ಕರಾವಳಿಯ ಬಹುತೇಕ ಶಿಕ್ಷಣ ಸಂಸ್ಥೆಗಳು ಘೋಷಿಸಿದ ತೀರ್ಮಾನವನ್ನು ಕೆಸಿಎಫ್ ಯುಎಇ  ಸಮಿತಿಯು ಶ್ಲಾಘಿಸುತ್ತದೆ ಸಂಸ್ಥೆಗಳ ಸಾಮಾಜಿಕ ಬದ್ಧತೆ ಯನ್ನು ಹಾಗು ಅನಿವಾಸಿಗರೋಂದಿಗೆ ತೋರಿದ ಪ್ರೀತಿಯನ್ನು ಪ್ರಶಂಸಿಸಿದ್ದು ಕರ್ನಾಟಕ ಕಲ್ಚರಲ್ ಫ್ಪೌಂಡೇಶನ್ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರೀಯ ಸಮಿತಿ ಸದ್ರಿ ಸಂಸ್ಥೆಗಳೊಂದಿಗೆ ಸಹಭಾಗಿತ್ವಕ್ಕೆ ಸಿದ್ಧವಾಗಿದೆ ಎಂದು ಅಧ್ಯಕ್ಸರಾದ ಅಬ್ದುಲ್ ಜಲೀಲ್ ನಿಜಾಮಿ ಎಮ್ಮೆಮಾಡು ಪ್ರಕಟನೆಯಲ್ಲಿ ತಿಳಿಸಿದರು.

PHOTO GALLERY

Image may contain: one or more people ajman kcf sharjah kcf uae kcf abudabi kcf sjh kcf Image may contain: outdoor Image may contain: one or more people

Click Me to Share on Whatsapp

Related Post