ಕೆಸಿಎಫ್ ಸ್ವಯಂಸೇವಕರ ತಂಡ
Click Me to Share on Whatsappವಿಶ್ವ ಖ್ಯಾತಿಯ ದುಬೈ ಪೊಲಿಸರ ಸಹಯೊಗದಲ್ಲಿ ಕೆಸಿಎಫ್ ಸ್ವಯಂಸೇವಕರ ತಂಡ
ಇಂದು ವಿಶ್ವವೇ ಒಟ್ಟಾಗಿ ಹೋರಾಡುತ್ತಿರುವ ಮಹಾಮಾರಿ ಕೊರೋಣ ವೈರಸ್ ಗಲ್ಫ್ ರಾಷ್ಟ್ರಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುತ್ತಿದೆ. ಸೋಂಕು ಭಾದಿತರ ಸಂಖ್ಯೆ ಏರಿಕೆಯಾಗುವುದನ್ನು ನಿಯಂತ್ರಿಸಲು ಗಲ್ಫ್ ರಾಷ್ಟ್ರಗಳಲ್ಲಿ ಅಲ್ಲಿನ ಆರೋಗ್ಯ ಇಲಾಖೆಯು ತನ್ನೆಲ್ಲಾ ರೀತಿಯ ಶ್ರಮ ವಹಿಸಿ ಹೋರಾಡುತ್ತಿದೆ. ಅದಕ್ಕಾಗಿಯೇ ಅರ್ಥಿಕ ವಲಯಗಳನ್ನು ತಾತ್ಕಾಲಿಕ ಬಂದ್ ಮಾಡುವಂತೆ ಕರೆಕೊಟ್ಟಿದೆ. ನಾಲ್ಕು ವಾರಗಳ ಕಾಲ ಮಸೀದಿ ಬಂದ್ ಮಾಡಿ ಮನೆಯಲ್ಲೇ ನಮಾಝ್ ನಡೆಸುವಂತೆ ತಿಳಿಸಿದೆ. ಪರಸ್ಪರ ಅಂತರ ಕಾಪಾಡುವಂತೆ ಮನವಿ ಮಾಡಿದೆ. ಕೋವಿಡ್-19 ವಿರುಧ್ಧದ ಹೋರಾಟಕ್ಕೆ ಆರೋಗ್ಯ ಸಚಿವಾಲಯ ನಿರ್ದೇಶಿಸುವ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಆದೇಶವನ್ನು ನೀಡಿದೆ. ಕಾರುಗಳಲ್ಲಿ ಮೂರು ಜನಕ್ಕಿಂತ ಹೆಚ್ಚು ಜನರು ಸಂಚರಿಸಬಾರದೆಂದು ನಿರ್ದೇಶನವನ್ನು ನೀಡಿದೆ. ಸೋಂಕಿನ ಯಾವುದೇ ಸೂಚನೆಗಳು ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ತಿಳಿಸುವಂತೆ ಟೋಲ್ ಫ್ರಿ ನಂಬರ್ ಕೂಡ ನೀಡಿರುತ್ತದೆ. ಅಲ್ಲಲ್ಲಿ ಸ್ಕ್ರೀನ್ ಟೆಸ್ಟ್, ಕ್ವಾರಂಟೈನ್ ವ್ಯವಸ್ಥೆ, ಹೋಮ್ ಕ್ವಾರಂಟೈನ್, "ಸ್ಟೇ ಹೋಂ" ಅಭಿಯಾನದ ಮೂಲಕ ಸಂಸ್ಥೆಯ ಸಿಬ್ಬಂದಿಗಳನ್ನು ಮನೆಯಿಂದಲೇ ಕೆಲಸ ಮಾಡುವಂತೆ ಪ್ರೇರಣೆ ನೀಡುತ್ತಿದೆ.
ದುಬೈ ಸರಕಾರದ ಕೊವಿಡ್-19 ವಿರುಧ್ಧದ ಹೋರಾಟದಲ್ಲಿ ಇನ್ನು ಮುಂದೆ ಐಸಿಎಫ್ ಮತ್ತು ಕೆಸಿಎಫ್ ಕಾರ್ಯಕರ್ತುರು ಕೈಜೋಡಿಸಲಿದ್ದಾರೆ. ದುಬೈ ಮರ್ಕಝ್ ಕೇಂದ್ರಿಕರಿಸಿ ದುಬೈ ಪೋಲೀಸರೊಂದಿಗೆ ಸಹಕಾರ ನೀಡವಂತೆ ಕೋರಿದ ಸರಕಾರದ ಕೋರಿಕೆಗೆ ಸ್ಪಂದಿಸಿ ಇಂದು ಸ್ವಯಂ ಸೇವಕರು ದುಬೈ ಪೋಲೀಸರಿಂದ ತರಬೇತಿ ಪಡೆದರು. ಕೋವಿಡ್-19 ವಿರುದ್ದದ ಹೋರಾಟದ ಅಂಗವಾಗಿ ಯುಎಇ ಘೋಷಿಸಿದ ಲಾಕ್ಡೌನ್ ಮತ್ತು ಆರೋಗ್ಯ ಇಲಾಖೆಯ ಎಲ್ಲಾ ಮಾಹಿತಿಗಳನ್ನು ನೀಡಲು ಹಾಗೂ ಜಾಗೃತಿಗೊಳಿಸಲು ಕೆಸಿಎಫ್ ಕಾರ್ಯಕರ್ತರು ಸಹಕರಿಸಲಿದ್ದಾರೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ತಿಳಿಸಿದ್ದಾರೆ.
ಅದಕ್ಕೆ ಬೇಕಾಗಿ ಇಂದು ದುಬೈ ಪೋಲೀಸರು ತರಬೇತಿ ನೀಡಿ ಅಧಿಕೃತ ಐಡೆಂಟಿಟಿ ಕಾರ್ಡ್ ಹಾಗೂ ಜಾಕೆಟ್ ನೀಡಿದರು. ಇನ್ನು ಮುಂದೆ ಕಾವಿಡ್-19 ಕುರಿತು ದುಬೈ ಪೋಲೀಸರು ನಡೆಸುವ ಹೋರಾಟದಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಪರೇಡ್ ನಲ್ಲಿ ತಿಳಿಸಲಾಯಿತು. ದುಬೈ ಮುರಕ್ಕಾಬಾತ್ ಪೋಲೀಸ್ ವ್ಯಾಪ್ತಿಯಲ್ಲಿ ಕೆಸಿಎಫ್ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
![]()
![]()
![]()