Latest News

ಕ್ವಾರೈಂಟೇನ್: ಉಚಿತ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಸ್ಪಂದಿಸಬೇಕು- ಕೆಸಿಎಫ್ ಯುಎಇ

User 14/05/2020-02:21:12am Technology

ಕೆಸಿಎಫ್ ಯುಎಇ

ಕ್ವಾರೈಂಟೇನ್: ಉಚಿತ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಸ್ಪಂದಿಸಬೇಕು- ಕೆಸಿಎಫ್ ಯುಎಇ
ದುಬೈ: ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರ ತಾಯ್ನಾಡು ಕನಸು ನನಸಾಗಿದ್ದರೂ ಮಂಗಳೂರು ತಲುಪಿದ ಮೊದಲ ಪ್ರಯಾಣಿಕರನ್ನು ಜಿಲ್ಲಾಡಳಿತ ನಡೆಸಿಕೊಂಡ ರೀತಿಯನ್ನು ಕೆಸಿಎಫ್ ಯುಎಇ ತೀವ್ರವಾಗಿ ಖಂಡಿಸಿದೆ.
ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಕ್ಕೆ ನಿರಂತರ ಒತ್ತಡವನ್ನು ಹೇರಿ ತಾಯ್ನಾಡು ಯಾತ್ರೆಗೆ ಅವಕಾಶ ಕಲ್ಪಿಸಲು ಮೊತ್ತಮೊದಲನೆಯದಾಗಿ ಗಲ್ಫ್ ರಾಷ್ಟ್ರಗಳಿಂದ ಕೆಸಿಎಫ್ ಮನವಿಯನ್ನು ಸಲ್ಲಿಸಿತ್ತು. ನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅನಿವಾಸಿಗಳ ಕ್ವಾರೈಂಟೇನ್ ವ್ಯವಸ್ಥೆಗೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಊರಿನಲ್ಲಿರುವ ವಿದ್ಯಾಸಂಸ್ಥೆಗಳ ಕಟ್ಟಡಗಳನ್ನು ಕ್ವಾರೈಂಟೇನ್ ಆಗಿ ಬಳಸಿಕೊಳ್ಳಲು ಸಹಭಾಗಿತ್ವ ನೀಡುವುದಾಗಿ ತಿಳಿಸಲಾಗಿದೆ.
ಆದರಂತೆ ಜಿಲ್ಲಾಡಳಿತ ಪ್ರಕಟಿಸಿದ ಪಟ್ಟಿಯಲ್ಲಿ ಎರಡು ಹಾಸ್ಟೆಲ್ ಕಟ್ಟಡಗಳ ಹೆಸರನ್ನು ನಮೂದಿಸಲಾಗಿತ್ತು. ಆದರೆ ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿ ಒಪ್ಪಿಕೊಂಡಿದ್ದ ಸಂಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೋಟೆಲ್ ಗಳಲ್ಲಿ ಪಾವತಿ ಕಾರನ್ಟೈನ್ ಮಾಡಿಕೊಳ್ಳಲು ಅಸಾಧ್ಯವಿರುವ ಅನಿವಾಸಿ ಕನ್ನಡಿಗರಿಗೆ ಒದಗಿಸುವಲ್ಲಿ ಸಹಕರಿಸಬೇಕು
ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಜಲೀಲ್ ನಿಝಾಮಿ ಎಮ್ಮೆಮ್ಮಾಡು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗಲ್ಫ್ ನಲ್ಲಿ ಕೆಲಸ ನಷ್ಟ ಹೊಂದಿ, ಅಥವಾ ಉದ್ಯೋಗ ಅರಸಿ ವಿಸಿಟ್ ವೀಸಾ ಗಳಲ್ಲಿ ಬಂದು ಬರಿಗಯ್ಯಲ್ಲಿ ಹಿಂದಿರುಗುತ್ತಿರುವವರು ದುಬಾರಿ ವಿಮಾನ ಟಿಕೆಟ್ ಖರೀದಿಸಿ ಬರುತ್ತಿರುವುದನ್ನು ಮಾನವೀಯತೆಯಿಂದ ನೋಡಿಕೊಳ್ಳುವಿರಾಗಿ ವಿನಂತಿಸಿ ಕೊಂಡಿದ್ದಾರೆ .
ಉಪವಾಸಿಗರಾಗಿ ಬಳಲಿದ್ದ ಪ್ರಯಾಣಿಕರನ್ನು ಅನ್ನ ಪಾನೀಯ ನೀಡದೆ ಅಮಾನವೀಯವಾಗಿ ನಡೆಸಿಕೊಂಡ ರೀತಿ ಬಗ್ಗೆ ರಾಜ್ಯವೇ ತಲೆತಗ್ಗಿಸುವಂತಾಗಿದೆ. ಗರ್ಭಿಣಿ ಮಹಿಳೆಯರು, ಮಕ್ಕಳು, ವಯಸ್ಕರು ಕುಡಿಯಲು ನೀರು ಕೇಳಿದಾಗ ಅದನ್ನೂ ನೀಡಲು ಸಮರ್ಥ ಸಿಬ್ಬಂದಿಗಳಿಲ್ಲದೆ ಸತಾಯಿಸಿದ್ದು ಜಿಲ್ಲಾಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಖಾರವಾಗಿಯೇ ಪ್ರತಿಕ್ರಿಯಿಸಿದರು.
ಹಲವಾರು ಕಷ್ಟ ನಷ್ಟಗಳನ್ನು ಎದುರಿಸಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಅನಿವಾಸಿಗಳು ಅನಿವಾರ್ಯವಾಗಿ ತಾಯ್ನಾಡಿಗೆ ಯಾತ್ರ ಕೈಗೊಂಡಿರುವಾಗ ಅವರ ಬದುಕಿಗೆ ಭರವಸೆಯನ್ನು ನೀಡಬೇಕಾಗಿದ್ದ ಜಿಲ್ಲಾಡಳಿತ ಅವರನ್ನು ಒಂದು ದಿನಕ್ಕೆ 2000 ರೂಪಾಯಿ ನೀಡಿ ಬಲವಂತದ ಹೋಟೆಲ್ ಕ್ವಾರೈಂಟೇನ್ ಪಡೆಯಬೇಕೆಂದು ಹೇಳುವುದರ ಹಿಂದಿರುವ ಕಹಿ ಸತ್ಯವಾದರೂ ಏನು ಎಂದು ಜನಸಾಮಾನ್ಯರು ಪ್ರಶ್ನಿಸುವಂತಾಗಿದೆ ಎಂದು ಅವರು ಹೇಳಿದರು.

 

Click Me to Share on Whatsapp

Related Post