Latest News

ವಿಶ್ವ ಪ್ರಾರ್ಥನಾ ದಿನ  ಭಾರತದಿಂದ ಗ್ರಾಂಡ್ ಮುಫ್ತಿ  ಶೈಖ್ ಅಬೂಬಕರ್ ಅಹ್ಮದ್

User 14/05/2020-05:09:39am Technology

KCF UAE

ವಿಶ್ವ ಪ್ರಾರ್ಥನಾ ದಿನ 
ಭಾರತದಿಂದ ಗ್ರಾಂಡ್ ಮುಫ್ತಿ  ಶೈಖ್ ಅಬೂಬಕರ್ ಅಹ್ಮದ್ .

ಕೋವಿಡ್ ಮಹಾ ಮಾರಿಯಿಂದ  ಮುಕ್ತಿ ಹೊಂದಲು ವಿಶ್ವ ಸಂಸ್ಥೆಯೊಂದಿಗೆ ಕೈ ಜೋಡಿಸಿ  ಯು ಎ ಇ  ಯ ಪ್ರಮುಖ ಸಾಂಸ್ಕೃತಿಕ ಯೋಜನಾ ಸಂಸ್ಥೆಯಾದ ಹ್ಯೂಮನ್ ಫ್ರಟೆರ್ನಿಟಿ ಸಂಸ್ಥೆಯು ವಿಶ್ವ   ಪ್ರಾರ್ಥನಾ ಸಮ್ಮೇಳನವು ಇಂದು   ಗುರುವಾರ ನಡೆಯಲಿದೆ  ವಿಶ್ವದ ವಿವಿಧ ರಾಷ್ಟ್ರಗಳಲ್ಲಿ  ಈ ಕುರಿತು  ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ .

ಭಾರತದಿಂದ ಇಂಡಿಯನ್ ಗ್ರಾಂಡ್ ಮುಫ್ತಿ  ಎ ಪಿ  ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ .

ಕೋವಿಡ್ ಮಹಾಮಾರಿಯಿಂದ ಮುಕ್ತಿಹೊಂದಲು ವಿಜ್ಞಾನಿಗಳು , ವಿಶ್ವ ಅರೋಗ್ಯ ಸಂಸ್ಥೆ ,ಹಾಗು ವಿಶ್ವದ ಹಲವಾರು ಸಂಘ ಸಂಸ್ಥೆಗಳು ನಡೆಸುವ ಹೋರಾಟಕೆ ಬೆಂಬಲ ಮತ್ತು ಶೀಘ್ರ ಫಲ ಕಾಣಲು  ಪ್ರಾರ್ಥನೆಯಿಂದ ಸಾಧ್ಯ ಎಂದು  ವಿಶ್ವ ಸಂಸ್ಥೆಯ  ಸೆಕ್ರಟರಿ ಜೆನರಲ್  ಅಂಟೋನಿಯೋ ಗುಟಾರಸ್  ತಿಳುಸಿದರು  . ಶೈಖುಲ್ ಅಝ್ಹರ್ ಶೈಖ್ ಅಹ್ಮದುಲ್ ತ್ವಯಿಬ್ ಮತ್ತು ಪೋಪ್ ಫ್ರಾಸಿಸ್ , ವಿವಿಧ ಅರಬ್ ರಾಜ್ಯ ಮತ್ತು ಯುರೋಪ್ ರಾಷ್ಟ್ರಗಳ ಮುಖಂಡರುಗಳು ಪ್ರಾರ್ಥನಾ ದಿನಕ್ಕೆ ಬೆಂಬಲ ಸೂಚಿಸಿದ್ದಾರೆ .
ಯು ಎ ಇ ಯ ಹ್ಯೂಮೆನ್ ಫ್ರಟೆರ್ನಿಟಿ ಸಂಸ್ಥೆಯ ಅಪೇಕ್ಷೆಯಮೇರೆಗೆ  ಇಂಡಿಯನ್ ಗ್ರಾಂಡ್ ಮುಫ್ತಿ  ಎ ಪಿ  ಉಸ್ತಾದರು ಇಂದು ಮದ್ಯಾಹ್ನ  12 ಗಂಟೆಗೆ  ಆನ್ಲೈನ್ ಮೂಲಕ ನಡೆಸುವ ಪ್ರಾರ್ಥನಾ ಸಂಘಮದಲ್ಲಿ ಸಾವಿರಾರು ಮಂದಿ ವೀಕ್ಷಿಸಲಿದ್ದಾರೆ 
https:www.youtube.com/sheikhaboobacker 
ಎಂಬ ಯೂಟ್ಯೂಬ್ ಚಾನೆಲ್ ಮೂಲಕ  
ಭಾರತೀಯ ಸಮಯ  12 ಗಂಟೆಗೆ  ವೀಕ್ಷಿಸಬಹುದು .

Click Me to Share on Whatsapp

Related Post