Latest News

ಯು.ಎ.ಇ: ಮನುಕುಲವನ್ನು ಗೌರವಿಸಿ ಎಂಬ ಸಂದೇಶವನ್ನು ಮೆರೆದ ಪಾಣೆಮಂಗಳೂರಿನ ಧೀರ ಯುವಕರಿಗೆ KCF ಯು.ಎ.ಇ ಅಭಿನಂದನೆ:

User 26/05/2020-11:33:58am Technology

KCF UAE

ಯು.ಎ.ಇ: ಮನುಕುಲವನ್ನು ಗೌರವಿಸಿ ಎಂಬ ಸಂದೇಶವನ್ನು ಮೆರೆದ ಪಾಣೆಮಂಗಳೂರಿನ ಧೀರ ಯುವಕರಿಗೆ KCF ಯು.ಎ.ಇ ಅಭಿನಂದನೆ:

ಕೊರೋನಾ ಎಂಬ ಮಾಹಾ ವೈರಸ್ ಗೆ ಹೆದರಿ ಜೀವಿಸುತ್ತಿರುವ ಈ ಸಮಯದಲ್ಲಿಯೂ ಮಾನವೀಯತೆ ಮೆರೆದ ಯುವಕರು, ಪಾಣೆಮಂಗಳೂರಿನ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ವಿಷಯ ತಿಳಿದ ಸ್ಥಳೀಯ ಗೂಡಿನಬಳಿ ಯುವಕರಾದ ಮುಹಮ್ಮದ್‌, ಸಮೀರ್,ಝಾಯಿದ್ , ಆರಿಫ್, ಮುಕ್ತಾರ್ ತೌಸೀಫ್ ರವರು ಯಾವುದೇ ಜಾತಿ ಧರ್ಮ ವನ್ನು ಲೆಕ್ಕಿಸದೆ ಕೂಡಲೇ ತಮ್ಮ ಜೀವನವನ್ನು ಪಣಕ್ಕಿಟ್ಟು ನದಿಗೆ ಹಾರಿ ಆ ಯುವಕನನ್ನು ನದಿಯಿಂದ ದಡಕ್ಕೆ ಸೇರಿಸಿ ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡುವುದರ ಮೂಲಕ ಪ್ರಾಣವನ್ನು ರಕ್ಷಿಸಲು ಪ್ರಯತ್ನಿಸಿದರು.ಆದರೆ ವಿಧಿಯ ಆಟವು ಬೇರೆಯಾಗಿತ್ತು. 

ಈ ಸಂದರ್ಭದಲ್ಲಿ ಹಫೀಝನ ಪಾತ್ರವೂ ಮಹತ್ವಪೂರ್ಣವಾದದ್ದು ಮೊದಲು ನೇತ್ರಾವತಿ ವೀರರ ಮನೆ ಬಾಗಿಲಿಗೆ ತೆರಳಿ ವಿಷಯ ಮುಟ್ಟಿಸಿದ್ದಾನೆ. ಆ ನಿರ್ದಿಷ್ಟ ಸ್ಥಳವನ್ನು ಸೂಚಿಸಿದ್ದು ಹಫೀಝ್ ಆಗಿದ್ದರು, ಈ ಹುಡುಗನಿಗೂ ತಮ್ಮೆಲ್ಲರ ಮೆಚ್ಚುಗೆಯೊಂದು ಇರಲಿ.

ಈ ವೀರ ಯುವಕರಿಗೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಯು.ಎ.ಇ ರಾಷ್ಟ್ರೀಯ ಸಮಿತಿಯು ಅಭಿನಂದನೆ ಸಲ್ಲಿಸುತ್ತದೆ.  

ಈದುಲ್ ಫಿತ್ರ್ ಹಬ್ಬ ಆಚರಿಸುವ ದಿನದಂದು ನಡೆದ ಘಟನೆಯು ಇಸ್ಲಾಮ್ ಜಗತ್ತಿಗೆ ಶಾಂತಿ, ಸೌಹಾರ್ದತೆ, ತ್ಯಾಗವನ್ನು ನೆನಪಿಸುವ ಮಾನವೀಯತೆಯ ಸಂದೇಶವನ್ನು ನೀಡಿದ್ದಾರೆ. ಇಡೀ ನಾಡು ಹೆಮ್ಮೆಪಡುವಂತಹ ಇವರ ಸೇವೆಯು ಶ್ಲಾಘನೀಯ ಎಂದು ಕೆಸಿಎಫ್ ಯು.ಎ.ಇ. ರಾಷ್ಟ್ರೀಯ ಅಧ್ಯಕ್ಷ ಜಲೀಲ್ ನಿಜಾಮಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

 Image may contain: 1 person, sunglasses, closeup and outdoor  No photo description available.

Click Me to Share on Whatsapp

Related Post