Latest News

ಮುಂಜಾನೆ ಅರ್ದತಾಸು ಬಸ್ ಕಾಯುವಾಗ  ಗಮನ ಸೆಳೆದ ಖರ್ಜೂರ .......

User 06/06/2020-12:13:56pm Technology

k

ಮುಂಜಾನೆ ಅರ್ದತಾಸು ಬಸ್ ಕಾಯುವಾಗ 
ಗಮನ ಸೆಳೆದ ಖರ್ಜೂರ .......

⚫️ಖರ್ಜೂರ, , 
ವೈಜ್ಞಾನಿಕ ಹೆಸರು Phoenix dactylifera, 

▪️ಸುಮಾರು 3000 ರಷ್ಟು ವಿವಿದ ಬಗೆಯ ಖರ್ಜೂರದಳಿವೆಯಂತೆ ...
▪️ಗತಕಾಲದ ಇತಿಹಾಸ ಹೊಂದಿರುವ , “ಮರುಬೂಮಿಯ ಬ್ರೆಡ್” (bread of the desert )ಎಂದು ಕರೆಯಲ್ಪಡುವ ಅರಬ್ ಮದ್ಯಪ್ರಾಚ್ಯ ರಾಷ್ಟರಗಳ ಪ್ರಮುಖ ಆಹಾರ ...
▪️ಖರ್ಜೂರ ಮರಗಳು 75 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ
▪️ಸ್ವಾದಿಷ್ಟ ಹಾಗು ಪೊಷಕಾಂಶ ಹೊಂದಿರುವ ಹಣ್ಣು, 70ಶೇಕಡ ಕಾರ್ಬೊಹೈಡ್ರೈಟ್, ನಾರಿನಂಶ , ಪ್ರೊಟಿೀನ್ , ಲವಣ( ಕ್ಯಾಲ್ಸಯಂ, ಕಬ್ಬಿಣ ,ಮೆಗ್ನೇಶಿಯಂ, ಪೊಟಾಶಿಯಂ,)ಹಾಗು ವಿಟಮೀನ್ ಯುಕ್ತ ವಾಗಿದ್ದೂ ಕೊವಿಡ್ ಕಾಲದಲ್ಲಿ ಬಹಳ ಉಪಯುಕ್ತವಾಗಿದೆ...
▪️ಇತ್ತೀಚಿನ ದಿನಗಳಲ್ಲಿ ಖರ್ಜೂರದ ಔಷಧೀಯ ಗುಣಗಳಬಗ್ಗೆ ಸಂಶೊಧನೆಗಳು ನಡೆದಿದ್ದೂ ಅತ್ಯಂತ ಸಾಮರ್ಥ್ಯವುಲ್ಲ ಆರೊಗ್ಯಕ್ಕೆ ಹಿತವಾದ ಅಂಶಗಳನ್ನು ಕಂಡು ಹಿಡಿದಿದ್ದಾರೆ ..
Phyotochemicals ಅಂಶಗಳನ್ನು ಹೊಂದಿರುವ 
ಇವು ಕೊಬ್ಬಿನಂಶವನ್ನು ಕಡಿಮೆಗೊಳಿಸಿ  ಮದುಮೇಹ , ಹೃದ್ರೊಗ, ಕ್ಯಾನ್ಸರ್  ಸಾದ್ಯತೆಯನ್ನು ಕುಗಿಸಲು ಸಹಕಾರಿ ಎಂದಿದ್ದಾರೆ ...
▪️ಸಾದರಣವಾಗಿ ಹಣ್ಣು ಅಥವಾ ಒಣ ಖರ್ಜೂರ ಲಬ್ಯವಾಗುತ್ತಾದರು ,  ,ಕ್ರಮವಾಗಿ
ಖಿಮಿರ್ ,ಖಲಾಲ್, ಬಿಸಿರ್ ,ರುತಬ್ ,ತಮ್ರ್ , ಎಂಬ ವಿವಿದ ಹಂತಗಳಲ್ಲಿ ಹಣ್ಣಾಗುತ್ತದೆ ...
ಖಲಾಲ್ -ಹಸಿರು ಬಣ್ಣದ ,ಅಷ್ಟೊಂದು ಸಿಹಿಯಲ್ಲದ ,ದೃಡವಾದ ಹಂಥವಾದರೆ      ಬಿಸಿರ್ - ದೃಡವಾದ ಬಣ್ಣದಲ್ಲಿ ಬದಲಾವಣೆಯಿರುವ ಹಲದಿ , ಕೆಂಪು ಬಣ್ಣಗಳಲ್ಲಿ ರುತ್ತವೆ 
ರುತಬ್ ಬಹಳ ರುಚಿಕರ, ಬೆಗೆ ಬಿಸಿಲಿನ ಕಾಲದಲ್ಲಿ ತಾಜ ತಿನ್ನಲು ಅರಬ್ ನಾಡಿನಲ್ಲಿ ನೆರವಾಗಿ ಮರದಿಂದ  ಲಭ್ಯವಾಗುವ ಹಂತ ,ತುದಿಯ ಬಾಗ ಹಣ್ಣಾಗಿ ಕಂದು ಬಣ್ಣ ಹಾಗು ಮೇಲಿನ ಅರ್ದಬಾಗ ಹಲದಿ ಬಣ್ಣದಿಂದಿರುವ ಈ ಹಂಥ ಎಲ್ಲರಿಗೂ ಇಷ್ಟ,
ಖರ್ಜೂರ  ಮತ್ತಷ್ಟು ಮೃದುವಾಗಿ ದ್ರವಸಾಂದ್ರತೆ ಅಥವ ಅರೆ ಘನ ಸ್ತಿತಿಯನ್ನು ಹೊಂದುತ್ತಾ  ಸಿಹಿ ಹಾಗು ರಸಭರಿತವಾದ ಸಂಪೂರ್ಣ ಹಣ್ಣಾದಾಗ ತಮ್ರ್ ಎನ್ನುತ್ತಾರೆ ,ಒಣಗಿಸಿದ ನಂತರ ಒಣ ಖರ್ಜೂರವಾಗಿ ಲಬ್ಯವಾಗುತ್ತದೆ,

ಭಾರತದಲ್ಲಿ ಗುಜರಾತ್ , ರಾಜಸ್ತಾನ್,ಪಂಜಾಬ್ ,ಹಾಗು ತಮಿಲ್ನಾಡು ಅಲ್ಪಮಟ್ಟಿಗೆ ಖರ್ಜೂರ ಕೃಷಿ ಮಾಡಲಾಗುತ್ತದೆ, ಆದರೆ ಖಲಾಲ್ ಹಂತದಲ್ಲೇ ಮಾರುಕಟ್ಟೆಗೆ ಏರಿ ಬಳಿಕ  ಕೃತಕವಾಗಿ ಹಣ್ಣಾಗಿಸಲಾಗುತ್ತದೆ, ಹವಮಾನದ ಕಾರಣ ಬಾರತದಲ್ಲಿ  ತಮ್ರ್ ಹಂತದವರೆಗೆ ಮರದಲ್ಲೆ ಬೆಳವಣಿಗೆಯಾಗುದಿಲ್ಲ

▪️ಈಜಿಪ್ಟ್ , ಇರಾನ್,ಸೌದಿ ಕ್ರಮವಾಗಿ ಅತೀಹೆಚ್ಚಿನ ಉತ್ಪಾದಕರು ,

▪️ಖರ್ಜೂರದ ಇತಿಹಾಸ ಪುರಾತನವಾದರು ಇಸ್ಲಾಂದರ್ಮಿಯರಿಗೆ ಇದು ಬಹಳ ಆತ್ಮಿಯ , ಉಪವಾಸ ತೊರೆಯಲು ಇದುವೆ ಪ್ರಥಮ ಆಯ್ಕೆ ,ಪವಿತ್ರ ಕುರ್ಆನ್ ಹಲವೆಡೆ ವಿಮರ್ಶಿಸಲ್ಪಟ್ಟ , ಹಾಗು ಪ್ರವಾದಿ (ಸ ಅ) ನುಡಿಗಳಲ್ಲಿ ಸೂಚಿಸಲ್ಪಟ್ಟ ಔಷದೀಯ ಹಣ್ಣು ,
“ಮದೀನಾದ ಅಜ್ವಾ ಖರ್ಜೂರವು ಸ್ವರ್ಗೀಯ”ಎಂಬತೆ ,
ಪ್ರವಾದಿ ಮುಹಮ್ಮದ್  (ಸ ಅ)ನುಡಿಯೋಂದು ಬಹಳ ಪ್ರಸಿದ್ದ ಹಾಗು ವಿಶ್ವಾಸಿಗಳು ಯಾವತ್ತು ನೆನಿಪಿನಲ್ಲಿಟ್ಟು ಜಿವನದಲ್ಲಿ   ಪ್ರೇರಣೆಯಾಗಿ ಅಲವಡಿಸಿಕೊಂಡಿರುವ ನುಡಿ “ಒಂದು ತುಂಡು ಖರ್ಜೂರದಿಂದಲಾದರು ನರಕದಿಂದ ಮುಕ್ತಿ ಹೊಂದಿರಿ “ ಎಲ್ಲಾ ದಾನ ಧರ್ಮಗಳ ಮೂಲವು ಇದುವೆ ಆಗಿವೆ ....
ಖರ್ಜೂರ ತಿನ್ನೊಣ ಆರೊಗ್ಯ ಕಾಯೊಣ.....
ಕಬೀರ್ ಬಾಯಂಬಾಡಿ

Image may contain: plant, fruit, outdoor, food and nature No photo description available.

Click Me to Share on Whatsapp

Related Post