ms
Click Me to Share on WhatsappMS EXCEL REFRESHER TRAINING
ಬದುಕಿನ ದಾರಿ ಹುಡುಕುತ್ತಿರುವವರಿಗೆ ಬಾಗಿಲು ತೆರೆದುಕೊಡುತ್ತಿದೆ; ಕೆಸಿಎಫ್ ಯುಎಇ!!!
ಅನಿವಾಸಿಗಳ ಬದುಕು ಇಂದು ಅತಂತ್ರಗೊಂಡಿದೆ. ಯಾವ ಸಂದರ್ಭದಲ್ಲೂ ಕೆಲಸದಿಂದ ವಜಾ ಅಗಬಹುದು. ಸಂಬಳವೂ ಕಡಿತವಾಗಬಹುದು. ಮಾರ್ಕೆಟಿಂಗ್ ಸ್ಥಿತಿಗತಿ ಪಾತಾಳದಲ್ಲಿದೆ. ಬೆಳಿಗ್ಗೆ ಹೋಗಿ ನೋಟಿಸ್ ಬೋರ್ಡ್ ಲ್ಲಿ ಯಾರ ಹೆಸರು ನೇತಾಡುತ್ತಿದೆ ಎಂದು ಊಹಿಸಲೂ ಅಸಾಧ್ಯ. ನಿರೀಕ್ಷೆಯ ಎಲ್ಲಾ ಮಜಲುಗಳು ನಿಷ್ಕ್ರಿಯಗೊಂಡಿದೆ. ಕೊವಿಡ್-19 ಮಹಾಮಾರಿ ಇಂದು ಇದ್ದ ಎಲ್ಲವನ್ನೂ ಕಳೆದುಕೊಂಡು ಲಕ್ಷಾಂತರ ಅನಿವಾಸಿಗಳು ಊರಿನ ದಾರಿ ಹಿಡಿದು ತಯ್ನಾಡು ಸೇರಿದರು.
ಅನಿವಾಸಿಗಳು ಬದುಕುವ ದಾರಿ ಹುಡುಕುತ್ತಿದ್ದಾರೆ. ಯಾವುದೇ ಕೆಲಸವಾದರೂ ಪರವಾಗಿಲ್ಲ ಮಾಡುತ್ತೇನೆ ಎಂದು ಹೇಳಿ ಕಂಪನಿಯಿಂದ ಕಂಪನಿಗೆ ತನ್ನ ಸಿವಿ ಕಳುಹಿಸಿ ಕೆಲಸ ನೀಡುವಂತೆ ಬೇಡಿಕೊಳ್ಳುತ್ತಿದ್ದಾರೆ. ರಾತ್ರಿ ಹಗಲೆನ್ನದೆ ಅಲ್ಲಾಹನ ಮುಂದೆ ಕಣ್ಣೀರು ಹರಿಸಿ ಪ್ರಾರ್ಥಿಸುತ್ತಿದ್ದಾರೆ. ಝಿಕ್ರ್ ದುಆಗಳ ಮೊರೆ ಹೋಗುತ್ತಿದ್ದಾರೆ. ಪುಣ್ಯಕ್ಕೆ ಯಾವುದಾದರೂ ಒಂದು ಕಂಪನಿಯಲ್ಲಿ ಅವಕಾಶ ದೊರಕಿದರೂ ಚಿಕ್ಕ ಪುಟ್ಟ ಕಾರಣಗಳಿಂದ ಕೆಲಸದಿಂದ ವಂಚಿತರಾಗುತ್ತಿದ್ದೇವೆ.
ಈ ಸಮಸ್ಯೆ ಬಗೆಹರಿಸುವುದಕ್ಕಾಗಿ ಕೆಸಿಎಫ್ ಬದುಕಿನ ದಾರಿಗೆ ಬೆಳಕು ಹರಿಸಲು ಯೋಜನೆಗಳನ್ನು ರೂಪಿಸುತ್ತಿದೆ. ಇದರ ಮೊದವ ಹಂತವಾಗಿ ಐಟಿ ಬಗ್ಗೆ ನುರಿತ ಅಧ್ಯಾಪಕರಿಂದ ಉತ್ತಮ ತರಬೇತಿ MS EXCEL REFRESHER TRAINING. ಇದು ಅತ್ಯಂತ ಬೇಡಿಕೆ ಇರುವಂತಹ ಒಂದು ಉಪಯುಕ್ತ ಕಲಿಕೆಯಾಗಿದೆ.
ಸಂಸ್ಥೆಯ ಯಾವುದೇ ಕಛೇರಿ ಸಂಬಂಧಿತ ಹುದ್ದೆಯಲ್ಲಿ ಸೇರಬೇಕಾದರೆ MS EXCEL ಬಗ್ಗೆ ಮಾಹಿತೆ ಇರಲೇಬೇಕಾಗುತ್ತದೆ. ಎರಡು ಮೂರು ಗಂಟೆಯಲ್ಲಿ ಮಾಡಬೇಕಾದ ಕೆಲಸಗಳನ್ನು ಕೇವಲ ನಿಮಿಷಗಳಲ್ಲಿ ಮಾಡಿ ಮುಗಿಸಲು ಅತೀ ಸುಲಭವಾಗಿ ಉಪಯೋಗಿಸಲು ಯೋಗ್ಯವಾದಂತಹ ಒಂದು ಸಾಫ್ಟ್ ವೇರ್ ಆಗಿರುತ್ತದೆ ಮೈಕ್ರೋ ಸೋಫ್ಟ್ ಎಕ್ಸ್ ಸೆಲ್. Excel ನಲ್ಲಿ ಎಕ್ಸ್ ಪರ್ಟ್ ನಮ್ಮ ಹುದ್ಧೆಗಳು ಕೂಡ ಬೆಳೆಯುತ್ತಾ ಹೋಗುತ್ತದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ನಿಮ್ಮ Excel ಜ್ಞಾನವನ್ನು ವೃಧ್ಧಿಸಿಕೊಂಡು ಉನ್ನತ ಹುದ್ದೆಗೆ ಭಡ್ತಿ ಪಡೆಯಲು ಕೆಸಿಎಫ್ ನಿಮಗೆ ನೀಡುತ್ತಿರುವ ಈ ಅವಕಾಶವನ್ನು ಸದುಪಯೋಗಪಡೆಯಲು ಮರೆಯದಿರಿ.