Latest News

ಆಗಸ್ಟ್ 7 ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

User 05/08/2020-03:06:21pm Technology

UAE

ಆಗಸ್ಟ್ 7 ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಯುಎಇ ವತಿಯಿಂದ ಲತೀಫಾ ಬ್ಲಡ್ ಡೊನೇಷನ್ ಸೆಂಟರ್ ದುಬೈಯಲ್ಲಿ ಕೆಸಿಎಫ್ ಬ್ಲಡ್ ಸೈಬೋ ಪ್ರಾಯೋಜಕತ್ವದಲ್ಲಿ ಬೃಹತ್ ರಕ್ತದಾನ  ಶಿಬಿರ ನಡೆಯಲಿದೆ. ಆಗಸ್ಟ್ 7 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12:30 ರವರೆಗೆ ಆಸಕ್ತರಿಗೆ ರಕ್ತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಸಿಎಫ್ ಬ್ಲಡ್ ಸೈಬೋ ವ್ಯವಸ್ಥಾಪಕ ನವಾಝ್ ಹಾಜಿ ಕೋಟೆಕಾರ್ ತಿಳಿಸಿದ್ದಾರೆ. 

ಮಾರಕವಾದ ರೋಗಗಳು ಇಂದು ಜಗತ್ತನ್ನೇ ಆವರಿಸಿಕೊಂಡಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿ ಕ್ಲಪ್ತ ಸಮಯಕ್ಕೆ ರಕ್ತ ಪೂರೈಕೆ ಮಾಡಲು ಅಸಾಧ್ಯವಾದ ಹಿನ್ನಲೆ ಜನರು ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿದೆ. ಆಸ್ಪತ್ರೆಗಳಲ್ಲಿ ರಕ್ತಗಳ ಅಭಾವ ಕಂಡು ಬರದ ಹಾಗೆ ನೋಡಿಕೊಳ್ಳಬೇಕು. ಅದಕ್ಕಾಗಿ ಕೆಸಿಎಫ್ ಯುಎಇ ಬ್ಲಡ್ ಸೈಬೋ ಹೆಸರಿನಲ್ಲಿ ಯುಎಇಯಾದ್ಯಂತ ಎಲ್ಲಾ ಎಮಿರೇಟ್ಸ್ ಗಳಲ್ಲೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲನೇ ರಕ್ತದಾನವು ಅಬುಧಾಬಿ ಜೂಲೈ 24 ರಂದು ಖಾಲಿದಿಯ್ಯ ಬ್ಲಡ್ ಬ್ಯಾಂಕ್ ನಲ್ಲಿ 105 ಯೂನಿಟ್ ರಕ್ತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಎರಡನೇ ಬ್ಲಡ್ ಸೈಬೋ ರಕ್ತದಾನ ಶಿಬಿರವನ್ನು ದುಬೈಯ ಲತೀಫಾ ಬ್ಲಡ್ ಡೊನೇಷನ್ ಸೆಂಟರ್ ನಲ್ಲಿ ಆಗಸ್ಟ್ 7 ರಂದು ಆಯೋಜಿಸಲಾಗಿದೆ ಎಂದು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ದುಬೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಒಂದು ಹನಿ ರಕ್ತದಾನದಿಂದ ಮನುಕುಲವನ್ನೇ ಉಳಿಸಿಕೊಳ್ಳಬಹುದು. ರಕ್ತದಾನದಿಂದ ಅರೋಗ್ಯ ಸಂರಕ್ಷಿಸಲ್ಪಡುತ್ತದೆ. ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಕೆಸಿಎಫ್ ಬ್ಲಡ್ ಸೈಬೋ ದುಬೈ ಯಲ್ಲಿರುವ ಎಲ್ಲಾ ಅನಿವಾಸಿಗಳಿಗೂ ಮುಕ್ತ ಅವಕಾಶ ಕಲ್ಪಿಸಿದ್ದು ಕ್ಲಪ್ತ ಸಮಯಕ್ಕೆ ತಲುಪಿ ಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Click Me to Share on Whatsapp

Related Post