uae
Click Me to Share on Whatsappತಾಜುಲ್ಫುಖಹಾಅ್ಬೇಕಲ_ಉಸ್ತಾದ್;
ಉಲಮಾ ದಿಗ್ಗಜರ ಸರಿಸಾಟಿಯಿಲ್ಲದ_ನೇತಾರಸುದೀರ್ಘ ಐದು ದಶಕಗಳ ಕಾಲ ಅಹ್ಲುಸ್ಸುನ್ನತಿ ವಲ್ ಜಮಾಅತ್ ನ ಆಶಯಾದರ್ಶಗಳ ವೈಜ್ಞಾನಿಕ ಪ್ರಭೆಯನ್ನು ಸಮೂಹಕ್ಕೆ ಹರಡಿಸಿ ಹಿರಿಯ ವಿದ್ವಾಂಸರೂ ವಾಗ್ಮಿ ಯೂ ಆದ ಶೈಖುನಾ ಬೇಕಲ ಇಬ್ರಾಹಿಂ ಮುಸ್ಲಿಯಾರ್(72) ಇದೀಗ ನಮ್ಮನ್ನಗಲಿದ್ದಾರೆ.
ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶ ನಾಯಕರಾಗಿ ಸುನ್ನೀ ಸಮೂಹಕ್ಕೆ ಇಸ್ಲಾಮಿನ ನೈಜ ಆಶಯಾದರ್ಶಗಳನ್ನು ಭೋದಿಸಿ ಕೊಡುತ್ತಿದ್ದ ಅಗ್ರೇಸ ಉಲಮರಾಗಿದ್ದರು.ಕೃಷಿಕನಾದ ಮುಹಮ್ಮದ್ ಮತ್ತು ಖದೀಜ ದಂಪತಿಗಳ 6 ನೇಯ ಪುತ್ರನಾಗಿ 1949 ಫೆಬ್ರವರಿ 27 ರಂದು ಜನಿಸಿದ ಬೇಕಲ ಉಸ್ತಾದರು ತನ್ನ ಊರಲ್ಲೇ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿದರು. ನಂತರ ಆಲಂಪಾಡಿ ಉಸ್ತಾದ್, ಶೈಖುನಾ ಅಲಿಕುಂಞ್ಞಿ ಉಸ್ತಾದ್, ತಾಜುಲ್ ಉಲಮಾ(ಖ:ಸಿ) ರವರ ದರ್ಸ್ ಗಳಲ್ಲಿ ಆಳವಾಗಿ ಅಧ್ಯಯನ ಮಾಡಿ,ಖುರ್ ಆನ್ ,ಹದೀಸ್,ತಸವ್ವುಫ್, ವಿಶ್ವಾಸ ಶಾಸ್ತ್ರ,ಕರ್ಮಶಾಸ್ತ್ರ,ಭಾಷಾಶಾಸ್ತ್ರ, ಖಗೋಳಶಾಸ್ತ್ರ,ನ್ಯಾಯ ಶಾಸ್ತ್ರ,ಭೌಗೋಳಿಕ ಶಾಸ್ತ್ರ ಮುಂತಾದ ವೈಜ್ಞಾನಿಕ ಶಾಖೆಗಳಲ್ಲಿ ಪ್ರತಿಭಾವಂತ ಪಂಡಿತನಾಗಿ ಹೊರಬಂದರು.
ವಿವಿಧ ಸ್ಥಳಗಳಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸಿರುವ ಉಸ್ತಾದರು ಬೇಕಲ ಎಂಬ ಪುಟ್ಟ ಗ್ರಾಮವನ್ನು ಇತಿಹಾಸದ ಪುಟಗಳಲ್ಲಿ ಸೇರಿಸಲು ತನ್ನ ತ್ಯಾಗೋಜ್ವಲವಾದ
40 ವರ್ಷದ ಬೇಕಲಾದ ಮೊಹಲ್ಲಾ ಸೇವೆಯಿಂದ
ಕಾರಣವಾಯಿತು.ಇಸ್ಲಾಮಿಕ ಜ್ಞಾನ ಶಾಖೆಯ ಎಲ್ಲಾ ವಿಷಯಗಳನ್ನು ಸವಿಸ್ತಾರವಾಗಿ ತಿಳಿಯಬಲ್ಲರೂ ಅಗ್ರಗಣ್ಯ ವಿದ್ವಾಂಸರೂ ಆಗಿದ್ದರು. ತನಗೆ ತಿಳಿದಂತಹ
ವಿದ್ಯೆಯನ್ನು ತನ್ನ ಬಾಗಿಲಿನ ಮುಂದೆ ಬರುವ ವಿಜ್ಞಾನ ದಾಹಿಗಳಿಗೆ ಅರ್ಥೈಸಿಕೊಡಲು ಬಹಳ ಉತ್ಸುಕರಾಗಿದ್ದರು.
ತನ್ನಿಂದ ವಿದ್ಯಾರ್ಜನೆಗೈದ ಹಲಹಲವಾರು ವಿದ್ವಾಂಸರು ಕರ್ನಾಟಕ ಮತ್ತು ಕೇರಳದ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಸ್ಲಾಮಿಕ ಕರ್ಮಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಅಗಾಧವಾದ ಪಾಂಡಿತ್ಯ ಅವರಿಗಿತ್ತು.
ಕೇವಲ ಒಂದು ಗಂಟೆ ಅವರ ಭಾಷಣವನ್ನು ಕೇಳಿದರೆ ಅವರ ವಿಜ್ಞಾನದ ಘನತೆ ಮತ್ತು ಗಾಂಭೀರ್ಯತೆಯನ್ನು ಮನದಟ್ಟಾಗಬಹುದು.
ಪಳ್ಳಿದರ್ಸುಗಳು ನಿರ್ಜೀವವಾಗಿರುವ ಈ ಕಾಲದಲ್ಲಿ ಅದರ ಶುಷ್ಕತೆಯ ಕುರಿತು ಅತೀವ ದುಃಖಿತರಾಗಿರುವ ಬೇಕಲ ಉಸ್ತಾದರು ಅದರ ಉನ್ನತಿಗೆ ತನ್ನಿಂದಾಗುವಷ್ಟು ಪ್ರೇರಣೆ ಯನ್ನು ನೀಡಲು ಯತ್ನಿಸಿದರು.ಧಾರ್ಮಿಕ ವಿಷಯದಲ್ಲಿ ಯಾರನ್ನೂ ಸಹ ಹೆದರುತ್ತಿರಲಿಲ್ಲ.ಸುದೀರ್ಘ 40 ವರ್ಷ ಬೇಕಲದಲ್ಲಿ ದರ್ಸ್ ಸೇವೆ, ಸಮಸ್ತ ಕೇಂದ್ರ ಮುಶಾವರ ಸದಸ್ಯ, ಉಡುಪಿ,ಹಾಸನ,ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಸಿ,ಕಾಸರಗೋಡು ಜಿಲ್ಲೆಯ ಕೆಲವು ಮೊಹಲ್ಲಾಗಳ ಖಾಸಿ, ಅಲ್ ಅನ್ಸಾರ್ ಸಂಪಾದಕ,
ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರೂ, ಜಾಮಿಯ ಸಅದಿಯ ಅರಬಿಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲರೂ, ಅಲ್-ಇಹ್ಸಾನ್ ಶರೀಅತ್ ಕಾಲೇಜು ಪ್ರಾಂಶುಪಾಲರು, ಹೀಗೆ ಹತ್ತು ಹಲವಾರು
ಹುದ್ದೆಯನ್ನು ಅಲಂಕರಿಸಿದರು.
ಖಗೋಳವಿಜ್ಞಾನ ಮತ್ತು ಇಸ್ಲಾಮಿಕ್ ಫಿಖ್ಹೀ ನ್ಯಾಯಶಾಸ್ತ್ರದಲ್ಲಿ ಗಮನಾರ್ಹ ವ್ಯಕ್ತಿತ್ವ ಹೊಂದಿದ್ದರು.ಸಮಸ್ತ ಉಲಮಾ ಒಕ್ಕೂಟದ ಒಂದು ಕಾಲದ ಇತಿಹಾಸ ನಾಯಕರು, ಉಲಮಾ ದಿಗ್ಗಜರೂ ಆಗಿದ್ದ
ಮರ್ಹೂಂ ಸಯ್ಯಿದ್ ತಾಜುಲ್ ಉಲಮಾ(ಖ:ಸಿ)ರ ನಂತರ, ಅವರು ಕರ್ನಾಟಕದ ಸುನ್ನಿ ಚಟುವಟಿಕೆಗಳಲ್ಲಿ ಪ್ರಭಾವಶಾಲಿ ನಾಯಕರಾಗಿದ್ದರು. ಕೇರಳದ ಪ್ರಮುಖ ಸೂಫಿವರ್ಯರೂ ಆಧ್ಯಾತ್ಮಿಕ ಗುರುವೂ ಆದಂತಹ ವಲಿಯ್ಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ (ಖ:ಸಿ)ರವರ ಆಶೀರ್ವಾದದೊಂದಿಗೆ ತಾಜುಲ್ ಉಲಮಾರ ನಿರ್ದೇಶನದಂತೆ
ಉಡುಪಿ ಖಾಸಿಯಾಗಿ 1997 ರಲ್ಲಿ ನಿಯಮಿತರಾದರು.ನೂರುಲ್ ಉಲಮಾ M.A ಉಸ್ತಾದರ ವಫಾತಿನ ನಂತರ ದಕ್ಷಿಣ ಭಾರತದ ಪ್ರತಿಷ್ಠಿತ ಸಂಸ್ಥೆ ಕಾಸರಗೋಡು ಜಾಮಿಯಾ ಸಅದಿಯಾ ಅರಬಿಯ ಶರೀಅತ್ ಕಾಲೇಜು ಉಪ ಪ್ರಾಂಶುಪಾಲರಾಗಿದ್ದರು. ನಿಬ್ರಾಸುಲ್ ಉಲಮಾ ಎ.ಕೆ ಉಸ್ತಾದರ ವಫಾತಿನ ನಂತರ
ಪ್ರಾಂಶುಪಾಲರಾಗಿ ಭಡ್ತಿ ಹೊಂದಿದರು.
ಮುಸ್ಲಿಂ ಕರ್ನಾಟಕದ ನಿರ್ಣಾಯಕ ಶಬ್ದ ವಾಗಿದ್ದ ತಾಜುಲ್ ಫುಖಹಾಅ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರ ಅಗಲಿಕೆ ಕೇರಳದ ಮತ್ತು ಕರ್ಣಾಟಕದ ತನ್ನ ಅನುಯಾಯಿ ವೃಂದಕ್ಕೆ ಅಕ್ಷರಶಃ ದೊಡ್ಡ ನಷ್ಟವಾಗಿದೆ.