uae
Click Me to Share on Whatsappಕೆಸಿಎಫ್ ಸಂಸ್ಥಾಪಕ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅಗಲಿಕೆಗೆ ಕೆಸಿಎಫ್ ಯುಎಇ ಸಂತಾಪ ಹಾಗೂ ದುಆ ಅಭ್ಯರ್ಥನೆ
ಸಮಸ್ತ ಕೇರಳ ಮುಶಾವರ ಸದಸ್ಯರೂ, ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಅಧ್ಯಕ್ಷರೂ, ದಕ್ಷಿಣ ಕನ್ನಟ ಮತ್ತು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ, ಜಾಮಿಆ ಸಅದಿಯ್ಯಾ ಸಂಸ್ಥೆಯ ಪ್ರೆನ್ಸಿಪಾಲರೂ ಹಲವಾರು ಸುನ್ನೀ ಸಂಘ ಸಂಸ್ಥೆಗಳ ನಾಯಕತ್ವ ಬಹುಮಾನ್ಯರಾದ ತಾಜುಲ್ ಫುಖಹಾಅ್ ಅಲ್ ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉಸ್ತಾದರ ಮರಣಕ್ಕೆ ಯುಎಇ ಕೆಸಿಎಫ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
ಕೇರಳ ಕರ್ನಾಟಕದಾದ್ಯಂತ ಚಿರಪರಿಚಿತರೂ ಇಸ್ಲಾಮೀ ಕರ್ಮಶಾಸ್ತ್ರ ವಿಭಾಗಗಳಲ್ಲಿ ಹಾಗೂ ಖಗೋಳ ಶಾಸ್ತ್ರದಲ್ಲಿ ಉನ್ನತ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದರು. ಗಲ್ಫ್ ರಾಷ್ಟ್ರಗಳಾದ್ಯಂತ ಹರಡಿ ನಿಂತಿರುವ ಕೆಸಿಎಫ್ ಸಂಘಟನೆಯ ಸ್ಥಾಪಕರೂ ಆಗಿರುವ ಬೇಕಲ್ ಉಸ್ತಾದರ ಅಗಲಿಕೆಯು ಸುನ್ನೀ ಸಮುದಾಯಕ್ಕೆ ಹಾಗೂ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವೆಂದು ಕೆಸಿಎಫ್ ಯುಎಇ ರಾಷ್ಟ್ರೀಯಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ದುಬೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುನ್ನೀ ಯುವ ಕಾರ್ಯಕರ್ತರ ಆವೇಶವೂ ಆಧ್ಯಾತ್ಮಿಕ ವೇದಿಕೆಗಳಲ್ಲಿ ನಿರಸಾನಿಧ್ಯವೂ ಆಗಿದ್ದ ಬೇಕಲ್ ಉಸ್ತಾದರ ಹೆಸರಿನಲ್ಲಿ ಕೆಸಿಎಫ್ ನ ಎಲ್ಲಾ ಘಟಕಗಳಲ್ಲೂ ಖತಮುಲ್ ಖುರ್ಆನ್ ಹಾಗೂ ತಹ್ಲೀಲ್ ಹೇಳಿ ಹದ್ಯಾ ಮಾಡಿ ಮಗ್ಫಿರತಿಗಾಗಿ ದುಆ ಮಾಡಬೇಕೆಂದು ಅವರು ಕೇಳಿಕೊಂಡರು.