UAE
Click Me to Share on Whatsappಕೆಂದ್ರ ಸರಕಾರದ ಭೂಮಸೂದೆ ಕಾಯ್ದೆ ವಿರುಧ್ದ ಕರ್ನಾಟಕ ಬಂದ್ ಗೆ ಕೆಸಿಎಫ್ ಯುಎಇ ಬೆಂಬಲ
ಯುಎಇ: ದೇಶಾದ್ಯಂತ ರೈತರ ಹಾಗೂ ರಾಜಕೀಯ ಪ್ರತಿಪಕ್ಷ ನಾಯಕರ ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಭೂಮಸೂದೆ ಕಾಯ್ದೆ ತಿದ್ದುಪಡಿಯನ್ನು ರಾಜ್ಯಸಭೆ ಅನುಮೋದಿಸಿದ್ದು ಸಂವಿಧಾನ ವಿರೋದಿ ಚಟುವಟಿಕೆಯಾಗಿದೆ. ಇದರಿಂದಾಗಿ ದೇಶದ ಹಸಿರು ಉಸಿರಾಗಿರುವ ರೈತರು ಇಂದು ಭೀತಿಯಲ್ಲಿ ಬದುಕುವಂತಾಗಿದೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಪ್ರಕಟಣೆಯಲ್ಲಿ ತಿಳಿಸಿದರು.
ಭೂಮಸೂದೆ ತಿದ್ದುಪಡಿ ಕಾಯ್ದೆಯು ಕೇವಲ ರೈತರ ಸಮಸ್ಯೆಯಾಗದೆ ಭಾರತದ ಉಸಿರನ್ನೇ ನಿಲ್ಲಿಸಿಬಿಡುವ ಕಾಯ್ದೆಯಾಗಿದೆ. ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ರೈತರು ಬೀದಿಗಿಳಿದು ಹೋರಾಡುತ್ತಿದ್ದರೂ ರಾಜ್ಯ ಸರಕಾರ ಅವರೊಂದಿಗೆ ಚರ್ಚೆ ಮಾಡಲು ತಯ್ಯಾರಾಗದೇ ಇರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಪ್ರತ್ಯೇಕವಾಗಿ ಉಲ್ಲೇಖಿಸಿದರು. ಕೆಸಿಎಫ್ ಯುಎಇ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದು ಕೇಂದ್ರ ಸರಕಾರದ ಭೂ ಮಸೂದೆ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತದೆ ಎಂದು ಹೇಳಿದರು.