ಕೇರಳದ ಚಾಲಕ್ಕುಡಿ ಪಟ್ಟಣದಲ್ಲಿ ವಿಚಿತ್ರ ಪ್ರಕರ
ಕೇರಳದ ಚಾಲಕ್ಕುಡಿ ಪಟ್ಟಣದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಅಪಾರ್ಟ್ ಮೆಂಟ್ ವೊಂದರ 18 ಮನೆಗಳ ನಳಗಳಲ್ಲೂ ನೀರಿನ ಬದಲು ಸಾರಾಯಿ ಉಕ್ಕಿ ಹರಿದ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಅಪಾರ್ಟ್ ಮೆಂಟ್ ನ ಎಲ್ಲರಿಗೂ ಶಾಕ್ ಕಾದಿತ್ತು. ನಳದಿಂದ ನೀರು ತೆಗೆಯಲು ನೋಡಿದರೆ ಸಾರಾಯಿ ಬರುತ್ತಿತ್ತು. ಇದರಿಂದ ಅಚ್ಚರಿಗೊಂಡ ಜನ ಬೀದಿಗೆ ಬಂದು ಕೋಲಾಹಲವೇ ಸೃಷ್ಟಿಯಾಗಿತ್ತು. ಜೊತೆಗೆ ಬಾವಿಯ ನೀರಿನಿಂದ ಸಾರಾಯಿ ಬರಲು ಹೇಗೆ ಸಾಧ್ಯ ಎನ್ನುವ ಅಚ್ಚರಿಗೆ ಕಾರಣವಾಗಿತ್ತು. ಆದರೆ ಆ ಬಳಿಕ ವಾಸ್ತವಾಂಶ ಏನೆನ್ನುವುದು ಬಯಲಾಗಿದೆ. ಈ ಎಲ್ಲ ಯಡವಟ್ಟುಗಳಿಗೂ ಅಬಕಾರಿ ಅಧಿಕಾರಿಗಳೇ ನೇರ ಕಾರಣವಾಗಿದ್ದರು. ಭಾರತದಲ್ಲೇ ಉತ್ಪಾದಿಸಿದ್ದ ವಿದೇಶಿ ಬ್ರಾಂಡ್ ಗಳ ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಇದರಲ್ಲಿ ಒಟ್ಟು 450 ಪೆಟ್ಟಿಗೆ ಮದ್ಯವಿತ್ತು. ಆ ಮದ್ಯಗಳನ್ನು ಈ ಅಪಾರ್ಟ್ ಮೆಂಟ್ ನ ಸಮೀಪದ ಬಯಲು ಪ್ರದೇಶದಲ್ಲಿ ನಾಶಗೊಳಿಸಲಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿದ್ದ ಮದ್ಯ ಬಾವಿಗೆ ಹರಿದು ನೀರಿನಲ್ಲಿ ಸೇರಿಕೊಂಡಿತ್ತು. ಇದರಿಂದಾಗಿ ಅಪಾರ್ಟ್ ಮೆಂಟ್ ಗೆ ಪೂರೈಕೆಯಾದ ನೀರಿನಲ್ಲಿ ಮದ್ಯ ಸೇರಿಕೊಂಡು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ.Click Me to Share on Whatsapp