Latest News

ಯುಎಇಯಲ್ಲಿ ಕರ್ನಾಟಕದ ಮಾತೃಭಾಷೆಯಲ್ಲೇ ಆನ್ಲೈನ್ ಮದ್ರಸ ಆರಂಭ!!! ಕನ್ನಡಿಗ ಕುಟುಂಬಗಳ ಬಹುದಿನಗಳ ಕನಸು ನನಸಾಗುವ ಸುಸಂದರ್ಭ!!!

User 09/06/2020-11:17:59am Technology

UAE


ಯುಎಇಯಲ್ಲಿ ಕರ್ನಾಟಕದ ಮಾತೃಭಾಷೆಯಲ್ಲೇ ಆನ್ಲೈನ್ ಮದ್ರಸ ಆರಂಭ!!! ಕನ್ನಡಿಗ ಕುಟುಂಬಗಳ ಬಹುದಿನಗಳ ಕನಸು ನನಸಾಗುವ ಸುಸಂದರ್ಭ!!!

ಊರಿನ ಮದ್ರಸ ರೀತಿಯಲ್ಲಿ ನಮಗೂ ಮದ್ರಸ ಬೇಕೆಂಬುದು ಯುಎಇ  ಅನಿವಾಸಿ ಕನ್ನಡಿಗ ಕುಟುಂಬಗಳ ಬಹುದಿನಗಳ ಬೇಡಿಕೆಯಾಗಿತ್ತು. ಮಕ್ಕಳ ಧಾರ್ಮಿಕ ಶಿಕ್ಷಣ ಅಭಿವೃದ್ಧಿ ಹೊಂದಬೇಕಾದರೆ ಮಾತೃಭಾಷೆಯಲ್ಲೇ ಅದರ ಶಿಕ್ಷಣ ಸಿಗಬೇಕು. ಆಗ ಮಾತ್ರ ಅದರ ಮಾಧುರ್ಯವನ್ನು ಸವಿಯಲು ಸಾಧ್ಯ. ಧಾರ್ಮಿಕ ಜ್ಞಾನ ಎಂಬುವುದು ಮನುಷ್ಯ ಬದುಕಿನ ಅವಿಭಾಜ್ಯ ಅಂಗ. ಧಾರ್ಮಿಕ ಭೋದನೆಯೊಂದಿಗೆ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುವುದು ಪ್ರತಿಯೊಬ್ಬ ಸತ್ಯವಿಶ್ವಾಸಿಯ ಆದ್ಯ ಕರ್ತವ್ಯ. ಪವಿತ್ರ ಇಸ್ಲಾಮಿನ ಜೀವ ಕೂಡ ಇದುವೇ ಆಗಿದೆ.

ಉತ್ತಮ ಶಿಷ್ಟಾಚಾರವನ್ನು ಮೈಗೂಡಿಸಿಕೊಂಡು ಬದುಕಬೇಕಾದರೆ ಉತ್ತಮ ಪಧಾರ್ಮಿಕ ಭೋದನೆ ಅತ್ಯಗತ್ಯ. ಇದೀಗ ಶಾರ್ಜಾ ಅಶ್ಶಾರಿಕತುಲಿಲ್ ಕುರ್ಆನಿಲ್ ಕರೀಂ & ಅಲ್ ಸುನ್ನ ಅನುಮತಿಯೊಂದಿಗೆ ಯುಎಇಯಲ್ಲಿ ನೆಲೆಸಿರುವಂತಹ ಅನಿವಾಸಿ ಕುಟುಂಬಗಳಿಗೆ ಕನ್ನಡಿಗರ ಆಡಳಿತ ವ್ಯವಸ್ಥೆಯಲ್ಲಿ ಅಖಿಲ ಭಾರತ ಸುನ್ನೀ ಎಜುಕೇಶನಲ್ ಬೋರ್ಡ್ ಸಿಲೆಬಸ್ ಆಧರಿಸಿ ಮಾತೃ ಭಾಷೆಯಲ್ಲಿ ಉತ್ತಮ ಭಾಷಾ ಜ್ಞಾನ ಹೊಂದಿದ ಉಸ್ತಾದರುಗಳ ಆಯ್ಕೆಯೊಂದಿಗೆ ಕನ್ನಡ, ಬ್ಯಾರಿ, ಮಲಾಮೆ, ಇಂಗ್ಲಿಷ್, ಉರ್ದು, ಹಿಂದಿ ಭಾಷೆಗಳಲ್ಲಿ ನಿಮ್ಮ ಮಕ್ಕಳಿಗೆ ಮದ್ರಸ ಶಿಕ್ಷಣವನ್ನು ನೀಡುವಂತಹ ಉತ್ತಮ ಯೋಜನೆಗೆ ದುನ್ನೂರೈನ್ ಸಂಸ್ಥೆ ದಾಪುಗಾಲಿಟ್ಟಿದೆ.

ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ, ಅಲ್ಲಾಹನನ್ನು ಭಯಪಟ್ಟು ಸುಸಂಸ್ಕೃತಿಯ ಜೀವನಕ್ಕಾಗಿ, ಪಾರತ್ರಿಕ ಮೋಕ್ಷಕ್ಕಾಗಿ,ಉತ್ತಮ ನಡವಳಿಕೆಯ ಮಕಳಾಗಿ ಪರಿವರ್ತಿಸಲು ಇಂದೇ ರಿಜಿಸ್ಟರ್ ಮಾಡಿ.
https://wa.me/+971553711227
https://wa.me/+971555318631
https://wa.me/+971525632959

For application 
https://www.jotform.com/assign/201554666072051/201574567994066

No photo description available.

 

Click Me to Share on Whatsapp

Related Post