ದುಬೈ ಯಿಂದ ಸೌದಿ ಅರೇಬಿಯಾ ಬಸ್ ಯಾತ್ರೆ
ತಾಜುಲ್ಫುಖಹಾಅ್ಬೇಕಲ_ಉಸ್ತಾದ್; ಉಲಮಾ ದಿಗ್ಗಜರ ಸರಿಸಾಟಿಯಿಲ್ಲದ_ನೇತಾರ
ಕೆಸಿಎಫ್ ಯುಎಇ ವತಿಯಿಂದ ಯಶಸ್ವೀ ರಕ್ತದಾನ ಶಿಬಿರ
ಆಗಸ್ಟ್ 7 ದುಬೈ ಯಲ್ಲಿ ಕೆಸಿಎಫ್ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಕೆಸಿಎಫ್ ಯುಎಇ ಅಧ್ಯಕ್ಷರ ಈದ್ ಉಲ್ ಅಲ್ಹಾ ಸಂದೇಶ
ಬದುಕಿನ ದಾರಿ ಹುಡುಕುತ್ತಿರುವವರಿಗೆ ಬಾಗಿಲು ತೆರೆದುಕೊಡುತ್ತಿದೆ; ಕೆಸಿಎಫ್ ಯುಎಇ!!!
ಕೆಸಿಎಫ್ ಹೆಸರಿನಲ್ಲಿ ಹಾರಿ ಬರುತ್ತಿದೆ ಉಕ್ಕಿನ ಹಕ್ಕಿಗಳು!!
ಯುಎಇಯಲ್ಲಿ ಕರ್ನಾಟಕದ ಮಾತೃಭಾಷೆಯಲ್ಲೇ ಆನ್ಲೈನ್ ಮದ್ರಸ ಆರಂಭ!!! ಕನ್ನಡಿಗ ಕುಟುಂಬಗಳ ಬಹುದಿನಗಳ ಕನಸು ನನಸಾಗುವ ಸುಸಂದರ್ಭ!!!
ಮುಂಜಾನೆ ಅರ್ದತಾಸು ಬಸ್ ಕಾಯುವಾಗ ಗಮನ ಸೆಳೆದ ಖರ್ಜೂರ .......
ಅನಿವಾಸಿ ಕನ್ನಡಿಗರನ್ನು ಗೌರವ ಯುತವಾಗಿ ಸ್ವೀಕರಿಸಿದ ಜಿಲ್ಲಾಡಳಿತ ಅಭಿನಂಧನಾರ್ಹವಾಗಿದೆ, ಕೆಸಿಎಫ್ ಯುಎಇ
ವಿಶ್ವ ಪ್ರಾರ್ಥನಾ ದಿನ ಭಾರತದಿಂದ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್
ಕ್ವಾರೈಂಟೇನ್: ಉಚಿತ ವ್ಯವಸ್ಥೆಯ ಬಗ್ಗೆ ಜಿಲ್ಲಾಡಳಿತ ಸ್ಪಂದಿಸಬೇಕು- ಕೆಸಿಎಫ್ ಯುಎಇ
ಯುಎಯಿಂದ ಕರ್ನಾಟಕಕ್ಕೆ ತುರ್ತು ವಿಮಾನವಿಲ್ಲ ಕೇಂದ್ರದ ಧೋರಣೆ ವಿಷಾದನೀಯ: ಕೆಸಿಎಫ್
ವಿಶ್ವ ಖ್ಯಾತಿಯ ದುಬೈ ಪೊಲಿಸರ ಸಹಯೊಗದಲ್ಲಿ ಕೆಸಿಎಫ್ ಸ್ವಯಂಸೇವಕರ ತಂಡ
ಕೋವಿಡ್-19 ಸೇವಾ ಚಟುವಟಿಕೆಯ ಮುಂಚೂಣಿಯಲ್ಲಿ ಕೆಸಿಎಫ್ ಯುಎಇ
*ಅನಿವಾಸಿ ಭಾರತೀಯರನ್ನು ಕಡೆಗಣಿಸದಿರಲು ಕೆ .ಸಿ .ಎಫ್ . ಯು ಎ ಇ ರಾಷ್ಟ್ರೀಯ ಅಧ್ಯಕ್ಷರಿಂದ ಒತ್ತಾಯ *
ಭಾರತ ಸೇರಿ 7 ರಾಷ್ಟ್ರಗಳಿಂದ ವಿಮಾನ ಹಾರಾಟ ನಿಷೇಧಿಸಿದ ಕುವೈತ್
ಮುಸ್ಲಿಂ ಜಮಾಅತ್ ಮೆಂಬರ್ಶಿಪ್ ಅಭಿಯಾನಕ್ಕೆ “ಮಕ್ಕಾ ಹರಂ”ನಲ್ಲಿ ಚಾಲನೆ
ಶಾರ್ಜಾ ಝೋನ್: ಕೆಸಿಎಫ್ ಡೇ ಹಾಗೂ ಪ್ರತಿಭೋತ್ಸವ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭ
ಉಳ್ಳಾಲ: ಮದುವೆ ಹಾಲ್ ನಲ್ಲಿ ನಡೆದ ಲಿಫ್ಟ್ ಅವಘಡದಲ್ಲಿ ತುಂಬೆ ಒಳವೂರು ನಿವಾಸಿ ಹಂಝ(45) ಮೃತಪಟ್ಟಿದ್ದಾರೆ.
ದೆಹಲಿ ಹಿಂಸಾಚಾರ ಕೇಂದ್ರ ಸರ್ಕಾರ ಪ್ರಾಯೋಜಿತ ನರಮೇಧ: ಮಮತಾ ಬ್ಯಾನರ್ಜಿ
f
Click Me to Share on Whatsappಕೆಸಿಎಫ್ ಹೆಸರಿನಲ್ಲಿ ಹಾರಿ ಬರುತ್ತಿದೆ ಉಕ್ಕಿನ ಹಕ್ಕಿಗಳು!!
ಅನಿವಾಸಿಗಳ ಆಶಾಕಿರಣವಾಗಿ KCF ಚಾರ್ಟೆಡ್ ಫ್ಲೈಟ್...✍️ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷರು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
COVID-19 ಸಂದರ್ಭದಲ್ಲಿ ಬಹುಶಃ ಅತ್ಯಂತ ಹೆಚ್ಚು ತೊಂದರೆಗೊಳಗಾದವರು ನಮ್ಮ ಅನಿವಾಸಿಗಳಾಗಿರಬಹುದು. ನಾವೆಲ್ಲಾ ನಮ್ಮ ಮನೆಗಳಲ್ಲಿ ಕುಟುಂಬದೊಂದಿಗೆ ಲಾಕ್‌ಡೌನ್ ಕಳೆದಾಗ ಅತ್ತ ಕೆಲಸವೂ ಇಲ್ಲ ಕುಟುಂಬದ ಸಾಮಿಪ್ಯವೂ ಇಲ್ಲ ಜೊತೆಗೆ ವೇತನವೂ ಇಲ್ಲದೆ ಗಲ್ಫ್ ರಾಷ್ಟ್ರಗಳ ಫ್ಲಾಟ್‌ಗಳಲ್ಲಿ ಬಂಧಿಯಾಗಿ ಕಾಲ ಕಳೆದವರು ಬಹುತೇಕ ನಮ್ಮ ಅನಿವಾಸಿಗಳು!
ಆದರೆ ಆ ಸಂದರ್ಭದಲ್ಲೂ ಪ್ರತಿ ಫ್ಲಾಟ್‌ಗಳಿಗೆ ಆಹಾರ ಪೊಟ್ಟಣಗಳನ್ನು, ಸಾಮಾಗ್ರಿಗಳನ್ನು ತಲುಪಿಸಿ, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ, ಬೇಕಾದ ಶುಶ್ರೂಷೆಯನ್ನೂ ಸಾಂತ್ವನವನ್ನೂ ನೀಡಿದ ನಮ್ಮ ಕೆಸಿಎಫ್ ಮಿತ್ರರು ಈಗ ಹಲವು ರಾಷ್ಟ್ರಗಳಿಂದ ತಂತಮ್ಮ ಊರಿಗೆ ತಲುಪಬೇಕಾದವರಿಗಾಗಿ ಚಾರ್ಟೆಡ್ ಫ್ಲೈಟ್‌ಗಳ ವ್ಯವಸ್ಥೆ ಮಾಡಿ ನೂರಾರು ಗರ್ಭಿಣಿಗಳನ್ನು, ರೋಗಿಗಳನ್ನು ಹಾಗೂ ತುರ್ತಾಗಿ ಊರಿಗೆ ತಲುಪಬೇಕಾದ ಇನ್ನಿತರರನ್ನು ಧರ್ಮ ಜಾತಿಯನ್ನು ನೋಡದೆ ಸುರಕ್ಷಿತವಾಗಿ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಜಕ್ಕೂ ಒಂದು ಫ್ಲೈಟ್ ಚಾರ್ಟೆಡ್ ಮಾಡಿ ಅದರಲ್ಲಿ ಹೋಗಬೇಕಾದ ಜನರನ್ನು ಆಯ್ಕೆ ಮಾಡಿ ಅವರಿಗೆ ಬೇಕಾದ ಸುರಕ್ಷಾ ವ್ಯವಸ್ಥೆಗಳನ್ನು ಕಲ್ಪಿಸಿ ಕಳುಹಿಸಿ ಕೊಡುವುದು ಅಷ್ಟೇನೂ ಸುಲಭದ ಸಂಗತಿಯಲ್ಲ. ಹಲವಾರು ನಮ್ಮ ನಾಯಕರು ಕಾರ್ಯಕರ್ತರು ಇದಕ್ಕಾಗಿ ರಾತ್ರಿ-ಹಗಲೆನ್ನದೆ ನಿದ್ದೆ ಬಿಟ್ಟು ಓಡಾಡಿದ್ದಾರೆ, ಕಷ್ಟಪಟ್ಟಿದ್ದಾರೆ, ಹಲವು ಅಧಿಕಾರಿಗಳನ್ನು ಕಂಡು ಅದಕ್ಕೆ ಬೇಕಾದ ವ್ಯವಸ್ಥೆ ಸುಸೂತ್ರವಾಗಿ ನಡೆಯಲು ಪಾಡು ಪಟ್ಟಿದ್ದಾರೆ. ಇತ್ತೀಚೆಗೆ ಕೆಲವು ದಿನಗಳಿಂದ ಯಾವುದೇ ಕೆಸಿಎಫ್ ನಾಯಕರೊಂದಿಗೆ ಯಾವುದೇ ವಿಷಯದಲ್ಲಿ ಮಾತನಾಡಿದಾಗಲೂ ಇದರ ಬಗ್ಗೆಯೇ ಅವರು ಫುಲ್ ಬ್ಯುಸಿಯಾಗಿದ್ದರು! ಅಲ್ಲಾಹು ಎಲ್ಲವನ್ನೂ ಖಬೂಲ್ ಮಾಡಲಿ-ಆಮೀನ್
ಯುಎಇ, ಸೌದಿ ಅರೇಬಿಯಾ, ಕತಾರ್ ರಾಷ್ಟ್ರಗಳಿಂದ ಈಗಾಗಲೇ ವಿಮಾನಗಳು ಬಂದು ತಲುಪಿದ್ದು ಬಹ್ರೈನ್, ಒಮಾನ್, ಕುವೈತ್, ಯುಎಇ ಸಹಿತ ಇನ್ನಷ್ಟು ರಾಷ್ಟ್ರಗಳ ಕೆಸಿಎಫ್ ಚಾರ್ಟೆಡ್ ಫ್ಲೈಟ್‌ಗಳು ನಮ್ಮೂರಿಗೆ ಬಂದಿಳಿಯಲಿದೆ.
ಈ ನಮ್ಮ ಕೆಸಿಎಫ್ ನಾಯಕರು ವ್ಯವಸ್ಥೆ ಮಾಡಿದ ಚಾರ್ಟೆಡ್ ಫ್ಲೈಟ್‌ಗಳ ಮೂಲಕ ಬಂದವರಲ್ಲಿ ಹಲವು ಅನ್ಯ ಧರ್ಮೀಯ ಮಿತ್ರರು ಕೂಡ ತಮಗೆ ಸುಗಮವಾಗಿ ಊರಿಗೆ ತಲುಪಲು ವ್ಯವಸ್ಥೆ ಮಾಡಿ ಕೊಟ್ಟ ಕೆಸಿಎಫ್ ಕಾರ್ಯಾಚರಣೆ ಬಗ್ಗೆ ಮನತುಂಬಿ ಪ್ರಶಂಸೆಯ ಮಾತುಗಳನ್ನಾಡಿದ್ದು ನಾವು ಕೇಳಿದ್ದೇವೆ. ಅಲ್ ಹಂದುಲಿಲ್ಲಾಹ್...
ಕೇವಲ ಏಳೆಂಟು ವರ್ಷಗಳ ಹಿಂದೆ ನಮ್ಮ ಅನಿವಾಸಿ ಮಿತ್ರರು ಕಟ್ಟಿ ಬೆಳೆಸಿದ ಕೆಸಿಎಫ್ ಈಗ ನಮ್ಮ ನಾಡಿನ ಸಂಸ್ಥೆ ಸಮುಚ್ಚಯಗಳಿಗೆ, ಸಂಘಟನಾ ಚಟುವಟಿಕೆಗಳಿಗೆ, ಉತ್ತರ ಕರ್ನಾಟಕದ ದಅವಾ ಕಾರ್ಯಾಚರಣೆಗಳಿಗೆ ಬೆನ್ನೆಲುಬಾಗಿ ಅನಿವಾಸಿ ಮಿತ್ರರ ಆಶಾಕಿರಣವಾಗಿ ಹೆಮ್ಮೆ ಯಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ!! ತಂತಮ್ಮ ಕುಟುಂಬಗಳ ಭಾರಹೊತ್ತು ದೂರದ ಪರದೇಶಕ್ಕೆ ಹಾರಿದ ನಮ್ಮೂರಿನ ನಮ್ಮವರು ದಿನವಿಡೀ ದುಡಿದು ಕೊನೆಗೆ ಸಿಕ್ಕುವ ಅಷ್ಟಿಷ್ಟು ಸಮಯಗಳನ್ನು ಸಂಪೂರ್ಣವಾಗಿ ಅಲ್ಲಾಹನ ದೀನಿನ ಖಿದ್‌ಮತ್‌ಗಾಗಿ, ಈ ಉಮ್ಮತ್ತಿನ ಸೇವೆಗಾಗಿ ಮೀಸಲಿಡುತ್ತಿರುವುದು ನಿಜಕ್ಕೂ ಗ್ರೇಟ್!! ಅಲ್ಲಾಹು ನಮ್ಮ ಅನಿವಾಸಿ ಮಿತ್ರರ ಎಲ್ಲಾ ಸಂಕಷ್ಟಗಳನ್ನು ದೂರಮಾಡಿ ಸಂತೃಪ್ತಿಯಿಂದ ಜೀವಿಸಲು ಅವರಿಗೂ ಕುಟುಂಬಕ್ಕೂ ನಮಗೂ ತೌಫೀಖ್ ನೀಡಲಿ-ಆಮೀನ್