Latest News

ಸಿಎಎಯಿಂದ ಹಿಂದೂ ರಾಷ್ಟ್ರವಾಗದು, ಆರ್‌ಎಸ್‌ಎಸ್‌ ಕನಸು ಎಂದಿಗೂ ನನಸಾಗಲ್ಲ: ದೇವೇಗೌಡ

User 13/02/2020-06:33:34pm Technology

NEWS

ಹೊಸದಿಲ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಗೆಲುವಿಗೆ ಸಿಎಎ ದಂಥ ಜನವಿರೋಧಿ ಕಾನೂನು ಕಾರಣವಾಗಿಲ್ಲ ಎಂಬುದನ್ನು ಬಿಜೆಪಿ ಅರಿಯಬೇಕಿದೆ. ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಆಮ್‌ ಆದ್ಮಿ ಪಕ್ಷಕ್ಕೆ ಜಾರಿಗೆ ತಂದಿದ್ದು ಗೆಲುವಿಗೆ ದಾರಿ ಮಾಡಿದವು

ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಆರ್‌ಎಸ್‌ಎಸ್‌ ಕನಸು ಎಂದಿಗೂ ನನಸಾಗದು. ಸಿಎಎ ಸೇರಿ ಇನ್ನಾವುದೇ ಕಾಯಿದೆಯಿಂದ ಭಾರತವನ್ನು ಹಿಂದೂ ರಾಷ್ಟ್ರ ವಾಗಿಸಲು ನೆರವಾಗದು ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದರು.

ಯರಮರಸ್‌ ಅತಿಥಿ ಗೃಹದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.

ಕೇಂದ್ರದ ಬಿಜೆಪಿ ಸರಕಾರವು ಕಳೆದ ಅವಧಿ ಹಾಗೂ ಈಗಿನ ಅವಧಿಯಲ್ಲಿ ಆರ್‌ಎಸ್‌ಎಸ್‌ ಅಜೆಂಡಾ ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ. ಆದರೆ, ಆರ್‌ಎಸ್‌ಎಸ್‌ ಉದ್ದೇಶ ಈಡೇರದು. ಸಿಎಎ ಕಾಯಿದೆ ಜಾರಿ ಸಾಕಷ್ಟು ಸಂಕಷ್ಟ ತಂದಿದೆ. ಕೇಂದ್ರ ಈಗಲಾದರೂ ಅಂಥ ಜನವಿರೋಧಿ ಕಾಯಿದೆ ಜಾರಿ ಬಿಟ್ಟು ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಲಿ ಎಂದು ಸಲಹೆ ನೀಡಿದರು.

ಅಭಿವೃದ್ಧಿ ಕಾರಣ

ಹೊಸದಿಲ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಗೆಲುವಿಗೆ ಸಿಎಎ ದಂಥ ಜನವಿರೋಧಿ ಕಾನೂನು ಕಾರಣವಾಗಿಲ್ಲ ಎಂಬುದನ್ನು ಬಿಜೆಪಿ ಅರಿಯಬೇಕಿದೆ. ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಆಮ್‌ ಆದ್ಮಿ ಪಕ್ಷಕ್ಕೆ ಜಾರಿಗೆ ತಂದಿದ್ದು ಗೆಲುವಿಗೆ ದಾರಿ ಮಾಡಿದವು ಎಂಬುದೇ ಸತ್ಯ ಎಂದರು.

ಕಾಂಗ್ರೆಸ್‌ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಲ್ಲ. ಕಾಂಗ್ರೆಸ್‌ ಸೇರಿ ಯಾವುದೇ ಪಕ್ಷದ ನಾಯಕರ ವಿರುದ್ಧ ಮಾತಾಡಲ್ಲ. ಈಗಿನ ರಾಜಕೀಯ ವ್ಯವಸ್ಥೆ ಬೇಸರ ತಂದಿದೆ. ಸಿಎಂ ಯಡಿಯೂರಪ್ಪ ಮೂರು ವರ್ಷ ಉತ್ತಮ ಆಡಳಿತ ನೀಡಿ ತೋರಿಸಲಿ ಎಂದು ಮಾಜಿ ಪ್ರಧಾನಿ ಸವಾಲು ಹಾಕಿದರು.

ಪ್ರಾದೇಶಿಕ ಪಕ್ಷಗಳಿಗೆ ದೇಶದಲ್ಲಿಉತ್ತಮ ಭವಿಷ್ಯವಿದೆ ಎಂಬುದನ್ನು ಹೊಸದಿಲ್ಲಿ ಚುನಾವಣೆ ಸಾಬೀತು ಮಾಡಿದೆ. ಹೀಗಾಗಿ ಜೆಡಿಎಸ್‌ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕಾರ್ಯ ಇನ್ನು ಮುಂದೆ ಮಾಡಲಾಗುವುದು. ತೃತೀಯರಂಗವನ್ನು ಮತ್ತೆ ಕಟ್ಟುವ ಪ್ರಯತ್ನ ಮಾಡಬಹುದು ಎಂದರು.

ಸುಪ್ರೀಂಕೋರ್ಟ್‌ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ ತೀರ್ಪಿನಿಂದ ಅನ್ಯಾಯವಾಗಲಿದ್ದು, ಕೇಂದ್ರ ಸರಕಾರ ಈ ಬಗ್ಗೆ ಪುನಾ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು. ದೇಶದ ಶೋಷಿತರ ಹಿತ ಕಾಯುವ ಕಾರ್ಯ ಮಾಡಬೇಕೆಂಕು. ಮೀಸಲಾತಿ ಅವಶ್ಯಕತೆಯನ್ನು ನ್ಯಾಯಾಲಯದ ಎದುರು ಸಮರ್ಥವಾಗಿ ಪ್ರತಿಪಾದಿಸಬೇಕು ಎಂದು ದೇವೇಗೌಡ ತಿಳಿಸಿದರು.

Click Me to Share on Whatsapp

Related Post