abudabi
Click Me to Share on Whatsappಅಬುಧಾಬಿ ಎಂಟನೇ ವರ್ಷದ ಕೆ.ಸಿ.ಎಫ್ ಡೇ ಹಾಗು ಪ್ರತಿಭೋತ್ಸವ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭ.
ಕೆ.ಸಿ.ಎಫ್ ಅಬುಧಾಬಿ ಝೋನ್ ವತಿಯಿಂದ ಎಂಟನೇ ವರ್ಷದ ಕೆ.ಸಿ.ಎಫ್ ಡೇ ಹಾಗು ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಸಮಿತಿ ಅಯೋಜಿಸಿದ ಪ್ರತಿಭೋತ್ಸವದಲ್ಲಿ ವಿಜಯಿಯಾದ ಪ್ರತಿಭೆಗಳಿಗೆ ಅಭಿನಂಧನಾ ಸಮಾರಂಭವು ಅಬುಧಾಬಿ ಮದೀನಾ ಝಹೀದ್ ಲುಲು ಪಾರ್ಟಿ ಸಭಾಂಗಣದಲ್ಲಿ ಫೆಬ್ರವರಿ.14 ರಂದು ಬಹು!ಸುಹೈಲ್ ಸಖಾಫಿ ಉಸ್ತಾದರ ಭಕ್ತಿಪೂರ್ಣವಾದ ದುವಾದೊಂದಿಗೆ ಅರಂಭಗೊಂಡ ಕಾರ್ಯಕ್ರಮವನ್ನು ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಕೋಶಾಧಿಕಾರಿ ಇಬ್ರಾಹಿಂ ಬ್ರೈಟ್ ಮಾರ್ಬಲ್ ಉದ್ಘಾಟಿಸಿದರು,ಕೆ.ಸಿ.ಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಬಹು!ಹಸೈನಾರ್ ಅಮಾನಿ ಅಜ್ಜಾವರ ಅಧ್ಯಕ್ಷೀಯ ಭಾಷಣ ನಿರ್ವಹಿಸಿದರು,ಕೆ.ಸಿ.ಎಫ್ ಅಂತರಾಷ್ಟ್ರೀಯ ಫೈನಾಸ್ಸಿಯಲ್ ಕಂಟ್ರೋಲರ್ ಬಹು!ಅಬ್ದುಲ್ ಹಮೀದ್ ಸಹದಿ ಈಶ್ವರಮಂಗಲ ಪ್ರಾಸ್ತಾವಿಕ ಭಾಷಣಗೈದರು,ಕೆ.ಸಿ.ಎಫ್ ಅಬುಧಾಬಿ ಎಂಟು ವರ್ಷದ ಎಲ್ಲ ಹಾಗುಹೋಗುಗಳನ್ನು ಝೋನ್ ನಾಯಕ ಅಹ್ಮದ್ ಕಬೀರ್ ಬಾಯಂಪಾಡಿ ಸವಿವಿಸ್ತಾರವಾಗಿ ವಿವರಿಸಿದರು ಹಾಗು ಕೆ.ಸಿ.ಎಫ್ ಸಂಘಟನಾ ಜೀವನದ ಸಮಗ್ರ ಸಮಾಜ ಸೇವೆಯ ಹಲವಾರು ವೆಯುಕ್ತಿಕ ಅನಿಸಿಕೆಗಳನ್ನು ಬಶೀರ್ ಮುಲ್ಕಿ,ಜಾವಿದ್ ನಾವುಂದ,ಮನ್ಸೂರ್ ಚಿಕ್ಕಮಂಗಳೂರು ಮತ್ತು ಹನಾನ್ ಹಂಚಿಕೊಂಡರು
ಕೆ.ಸಿ.ಎಫ್ ಯು.ಎ.ಇ ರಾಷ್ಟ್ರ ಮಟ್ಟದ ಶಾರ್ಜಾದಲ್ಲಿ ನಡೆದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅಬುಧಾಬಿ ಝೋನ್ ಮಟ್ಟದಲ್ಲಿ ಪ್ರಥಮ ಪಡೆದ ಪ್ರತಿಭೆಗಳ ವಿವಿಧ ವಿಭಾಗದ ಧಾರ್ಮಿಕ ಕಾರ್ಯಕ್ರಮವಾದ ಬುರ್ದಾ ಮಜ್ಲಿಸ್,ದೀನೀ ಹಾಡು,ಕವಾಲಿ,ಕೆ.ಸಿ.ಎಫ್ ಹಾಡು ಮುಂತಾದ ಕಾರ್ಯಕ್ರಮ ಜರುಗಿತ್ತು ಹಾಗು ಕೆ.ಸಿ.ಎಫ್ ಅಬುಧಾಬಿ ಝೋನ್ ತನ್ನ ಎಂಟನೇ ವರ್ಷದ ಹಲವಾರು ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ,ಆರ್ಥಿಕ ಸಹಾಯ,ಬಡವರಿಗೆ ಮನೆ ವಸತಿಗೆ ಹಣಕಾಸಿನ ಸಹಾಯ,ಉತ್ತರ ಕರ್ನಾಟಕದ ಜನರಿಗೆ ಇಹ್ಸಾನ್ ಮೂಲಕ ದೀನೀ ಕಾರ್ಯಚಟುವಟಿಕೆಯ ಕಾರ್ಯರೂಪ ಮುಂತಾದ ಕಾರ್ಯವೈಖರಿಯನ್ನು ಸವಿವಿಸ್ತಾರವಾಗಿ ಕಾರ್ಯಕ್ರಮದಲ್ಲಿ ಸಭೆಗೆ ವಿವರಿಸಲಾಯಿತ್ತು ಮತ್ತು ಪ್ರತಿಭೋತ್ಸವದಲ್ಲಿ ವಿಜಯಿಯಾದ ಪ್ರತಿಭೆಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತ್ತು.
ಪ್ರಸುತ್ತ ಕಾರ್ಯಕ್ರಮದಲ್ಲಿ ಐ.ಸಿ.ಎಫ್ ಅಬುಧಾಬಿ ಸೆಂಟ್ರಲ್ ಅಧ್ಯಕ್ಷರಾದ ಬಹು!ಹಂಝ ಅಹ್ಸನಿ ವಯನಾಡ್, ಆರ್.ಎಸ್.ಸಿ ಯು.ಎ.ಇ ರಾಷ್ಟ್ರೀಯ ಅಧ್ಯಕ್ಷ ಹಮೀದ್ ಸಖಾಫಿ ಫುಲ್ಲರಾ, ಆರ್.ಎಸ್.ಸಿ ಅಬುಧಾಬಿ ಅಧ್ಯಕ್ಷರಾದ ಬಹು!ಇಬ್ರಾಹಿಂ ಸಹದಿ, ಐ.ಎನ್.ಸಿ ಸಂಘಟನಾ ಅಧ್ಯಕ್ಷರಾದ ಅಬ್ದುಲ್ ಹಮೀದ್ ಪಿ.ಎಂ.ಎಚ್, ಕೆ.ಸಿ.ಎಫ್ ಝೋನ್ ಕೋಶಾಧಿಕಾರಿಯಾದ ಮುಹಮ್ಮದ್ ಅಲಿ ಬ್ರೈಟ್ ಮಾರ್ಬಲ್, ಅಡ್ಕ ಮುಹಮ್ಮದ್ ಕುಂಞ. ಹಾಜಿ ಮುಂತಾದ ನಾಯಕರು ಉಪಸ್ಥರಿದ್ದರು.
ಕಾರ್ಯಕ್ರಮದಲ್ಲಿ ಝೋನ್ ಪ್ರ.ಕಾರ್ಯದರ್ಶಿ ಎನ್.ಕೆ ಸಿದ್ದೀಕ್ ಅಳಿಕೆ ಸ್ವಾಗತಿಸಿದರು,ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಉಮರ್ ಈಶ್ವರಮಂಗಲ ದನ್ಯವಾದಗೈದರು ಹಾಗು ಸೆಯ್ಯದ್ ಫುಕೊಯಾ ಮಿಸ್ಬಾಹಿ ತಂಘಳರ ಭಕ್ತಿಪೂರ್ಣವಾದ ದುವಾದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತ್ತು.
PHOTO GALLERY