Latest News

ದೆಹಲಿ  ಹಿಂಸಾಚಾರವನ್ನು  ಖಂಡಿಸಿದ  ಕರ್ನಾಟಕ ರಾಜ್ಯ  ಎಸ್ ವೈ ಎಸ್ 

User 27/02/2020-03:39:16pm Technology

ದೆಹಲಿ

ದೆಹಲಿ  ಹಿಂಸಾಚಾರವನ್ನು  ಖಂಡಿಸಿದ  ಕರ್ನಾಟಕ ರಾಜ್ಯ  ಎಸ್ ವೈ ಎಸ್ 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ದಿನಗಳಲ್ಲಿ ಅಮಾಯಕರನ್ನು ಕೊಲೆ, ದೌರ್ಜನ್ಯ , ನಡೆಸುತ್ತಾ  ಮಸೀದಿ , ಮನೆ , ವ್ಯಾಪಾರ ಕೇಂದ್ರಗಳನ್ನು  ಬೆಂಕಿಗಾಹುತಿಗೊಳಿಸಿ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸುತ್ತಿರುವ , ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಸರಕಾರ ಮುಂದಾಗಬೇಕೆಂದು ಎಸ್ ವೈ ಎಸ್ ರಾಜ್ಯ ನಾಯಕರು ಆಗ್ರಹಿಸಿದೆ .

ಹಿಂಸಾಚಾರವನ್ನು ಹತ್ತಿಕ್ಕಬೇಕಾದವರ ನಿಷ್ಕ್ರಿಯತೆ , ಸಾರ್ವಜನಿಕ ಸೇವೆಯಲ್ಲಿ ಗುರುತಿಸಬೇಕಾದವರು ಹಿಂಸೆಗೆ ಆಹ್ವಾನ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ,

ಸಭೆಯಲ್ಲಿ ಎಸ್ ವೈ ಎಸ್  ರಾಜ್ಯಾಧ್ಯಕ್ಷ  ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಮ್ ಝ್ಯೆನಿ  ಕಾಮಿಲ್ , ಕೋಶಾಧಿಕಾರಿ ಅಬ್ದುಲ್ ಹಕೀಮ ಕೊಡ್ಲಿಪೇಟೆ , ಮಾಧ್ಯಮ ಕಾರ್ಯದರ್ಶಿ ಹಫೀಳ್ ಸಅದಿ ಕೊಡಗು ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದರು .

Click Me to Share on Whatsapp

Related Post