Latest News

ಕೆಸಿಎಫ್ ಅಜ್ಮಾನ್ ಝೋನ್ ನಲ್ಲಿ ಯಶಸ್ವಿಯಾದ ಸ್ನೇಹಗೂಡು ಕಾರ್ಯಕ್ರಮ

User 01/03/2020-11:17:53am Technology

ಅಜ್ಮಾನ್

ಕೆಸಿಎಫ್ ಅಜ್ಮಾನ್ ಝೋನ್ ನಲ್ಲಿ ಯಶಸ್ವಿಯಾದ ಸ್ನೇಹಗೂಡು ಕಾರ್ಯಕ್ರಮ

ಯುಎಇ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಅಜ್ಮಾನ್ ಝೋನ್ ಸಂಘಟನಾ ವಿಭಾಗದಿಂದ  ಆಯ್ದ ಝೋನ್ ಮತ್ತು ಸೆಕ್ಟರ್ ಪ್ರತಿನಿಧಿಗಳಿಗೆ "ಸ್ನೇಹಗೂಡು" ಕಾರ್ಯಕ್ರಮವು ಕರಾಮ ಐಸಿಎಫ್ ಆಡಿಟೋರಿಯಂನಲ್ಲಿ ಶುಕ್ರವಾರ ಜುಮಾ ಬಳಿಕ ಯುಎಇ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಕೆದುಂಬಾಡಿ ಇಬ್ರಾಹಿಂ ಸಖಾಫಿರವರ ದುಆದೊಂದಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಸ್ವಾಗತಿಸಿ ಮಾತನಾಡಿದ ಝೋನ್ ಸಂಘಟನಾ ವಿಭಾಗದ ಕಾರ್ಯದರ್ಶಿ ಅಬ್ದುಲ್ ಖಾದರ್ ಕೊಡಿಪ್ಪಾಡಿ ಸ್ನೇಹವೇ ಎಲ್ಲಾ ಮನುಷ್ಯ ಸಂಪರ್ಕದ ಮೂಲ ಎಂದು ಹೇಳಿದರು. ನಂತರ ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷ ಮುಜೀಬ್ ಸಅದಿ ಪ್ರತಿಜ್ಱಾ ವಿಧಿಯನ್ನು ಸಭೆಗೆ ಭೋದಿಸಿದರು. 

ಅಜ್ಮಾನ್ ಝೋನ್ ಉಸ್ತುವಾರಿ ಶಾಹುಲ್ ಹಮೀದ್ ಸಖಾಫಿ ಮಾದಾಪುರಂ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಜ್ಮಾನ್ ಝೋನ್ ನಡೆಸುತ್ತಿರುವ ಶ್ಲಾಘನೀಯ ಸೇವೆಗಳು ಇತರ ಝೋನ್ ಗಳಿಗೂ ಮಾದರಿಯೋಗ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಝೋನ್ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಅಮಾನಿ ನಾವು ಪರಸ್ಪರ ಪ್ರೀತಿ ಸ್ನೇಹ ಉಳ್ಳವರಾಗಬೇಕು. ರಾಷ್ಟ್ರೀಯ ಸಮಿತಿಯು ನೀಡಿದ ಈ ಕಾರ್ಯಕ್ರಮ ಅಭಿನಂದನಾರ್ಹ ಎಂದು ಹೇಳಿದರು. 

ಮಾದರಿ ಕಾರ್ಯಕರ್ತ ಎಂಬ ವಿಷಯದಲ್ಲಿ ತರಗತಿ ನಡೆಸಿ ಮಾತನಾಡಿದ ಕೆದುಂಬಾಡಿ ಇಬ್ರಾಹಿಂ ಸಖಾಫಿ ಪ್ರತಿಯೊಬ್ಬ ಕಾರ್ಯಕರ್ತನು ಆತನು ನಾನು ಕಾರ್ಯಚರಿಸುತ್ತಿರುವುದು ಅಲ್ಲಾಹನ ದೀನ್ ಸಂರಕ್ಷಣೆಗಾಗಿರುತ್ತದೆ. ಅಲ್ಲಾಹನ ದೀನ್ ಸಂರಕ್ಷಣೆಗೆ ನಾನೇ ಇರುವುದು. ನನ್ನಿಂದಲೇ ಸಾಧ್ಯ ಎಂಬ ಭಾವನೆಯನ್ನು ಮೈಗೂಡಿಸಿಕೊಂಡು ಕಾರ್ಯಚರಿಸಬೇಕು. ಆಗ ಮಾತ್ರ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿ ಗುರಿಮಟ್ಟಲು ಸಾಧ್ಯ ಎಂದು ಬಹಳ ಅರ್ಥವತ್ತಾದ ರೀತಿಯಲ್ಲಿ ಸ್ವಹಾಬಿಗಳ ಚರಿತ್ರೆಯನ್ನು ಉಲ್ಲೇಖಿಸಿ ಸುದೀರ್ಘವಾಗಿ ಮಾತನಾಡಿದರು. ನಮ್ಮಿಂದ ಅಗಲಿದ ಹಲವಾರು ಸಯ್ಯದ್ ಸಾದಾತುಗಳು,ಉಲಾಮಗಳು, ಉಮಾರಾ ನಾಯಕರು, ಕಾರ್ಯಕರ್ತರನ್ನು ಸ್ಮರಿಸಿ ಯಾಸೀನ್ ಓದಿ ಅವರ ಪಾರತ್ರಿಕ ವಿಜಯಕ್ಕೆ ಬೇಕಾಗಿ ದುಆ ಮಾಡಲಾಯಿತು.

ಕಾರ್ಯಕ್ರಮದ ಮಧ್ಯ ಕಾರ್ಯಕರ್ತರ ಜ್ಞಾನ ವೃದ್ಧಿಸಲು ಕ್ವಿಝ್ ಸ್ಪರ್ಧೆಗಳನ್ನು ನಡೆಸಿ ಮನೋರಂಜನೆಯನ್ನು ನೀಡಲಾಯಿತು. ಸಂಘಟನೆ ವ್ಯವಸ್ಥೆಯಲ್ಲಿ ನಡೆಸಬೇಕಾದ ಬದಲಾವಣೆ ಮತ್ತು ಸಾಮಾಜಿಕ ಚಟುವಟಿಕೆಗಳ ವಿಸ್ತರಣೆಯ ಬಗ್ಗೆ ಗ್ರೂಪ್ ವಿಂಗಡಿಸಿ ಸಂವಾದ ಕೂಟವನ್ನು ಏರ್ಪಡಿಸಲಾಯಿತು. 

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಬಹು: ಹಯ್ಯ್ ಅಹ್ಸನಿಯವರ ಅರ್ಥಗರ್ಭಿತವಾದ ತರಗತಿ ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ಬದಲಾವಣೆ ತರುವಂತೆ ಮಾಡಿತು. ಎಫೆಕ್ಟಿವ್ ಮೀಟಿಂಗ್ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಿ ಮೀಟಿಂಗ್ ಗೆ ಮೂದಲು, ಮೀಟಿಂಗ್ ನಲ್ಲಿ ಮತ್ತು ಮೀಟಿಂಗ್ ನಂತರ ಮಾಡಬೇಕಾದ ಹಲವಾರು ಉತ್ಕೃಷ್ಟ ಚರ್ಚೆಯನ್ನು ನಡೆಸಿ ಇಂದಿನ ಅಧುನಿಕ ತಂತ್ರಜ್ಞಾನಗಳನ್ನು ಸರಿಯಾಗಿ ಬಳಕೆ ಮಾಡುವಂತೆ ತಿಳಿಸಿದರು. ಸಮಯದ ಕೊರತೆಯನ್ನು ನೀಗಿಸಲು ಮತ್ತು ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸಲು ಸೋಷಿಯಲ್ ಮೀಡಿಯಾಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಇಹ್ಸಾನ್ ಕನ್ವೀನರ್ ಕಾದರ್ ಸಅದಿ, ಸಯ್ಯದ್ ತಾಹಿರ್ ತಂಙಲ್, ಅಬ್ದುಲ್ ಕರೀಂ ಬಿಕರ್ನಕಟ್ಟೆ, ಝೋನ್ ಕಾರ್ಯದರ್ಶಿ ಆದಂ ಈಶ್ವರಮಂಗಿಲ ಪಾಲ್ಗೊಂಡಿದ್ದರು. 5 ನೇ ವರ್ಷದ ಗಲ್ಫ್ ಇಶಾರ ಕನ್ನಡ ಮಾಸಿಕದ ಅಭಿಯಾನಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿ ತಾಜುದ್ದೀನ್ ಉಳ್ಳಾಲರವರು ಧನ್ಯವಾದ ತಿಳಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.

 

PHOTO GALLERY

          Image may contain: 4 people 

Click Me to Share on Whatsapp

Related Post