ಪುರುಷರಂತೆ ಮಹಿಳೆಯರು ಮುಷ್ಟಿ ಬಿಗಿದು ಬೀದಿಗಿಳಿಯುವ ಅವಶ್ಯಕತೆ ಇಲ್ಲ: ಕಾಂತಪುರಂ ಎಪಿ ಉಸ್ತಾದ್ ಹೇಳಿಕೆ.
ಪುರುಷರಂತೆ ಮಹಿಳೆಯರು ಮುಷ್ಟಿ ಬಿಗಿದು ಬೀದಿಗಿಳಿಯುವ ಅವಶ್ಯಕತೆ ಇಲ್ಲ: ಕಾಂತಪುರಂ ಎಪಿ ಉಸ್ತಾದ್ ಹೇಳಿಕೆ. ಭಾರತದಲ್ಲಿ ನಡೆಯುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಈಗಾಗಲೇ ಭಾರತದ ಬೀದಿಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದೆ. ಆ ಪ್ರತಿಭಟನೆಗಳಲ್ಲೆಲ್ಲಾ ಪುರುಷರಂತೆ ಮಹಿಳೆಯರು ಬೀದಿಗಿಳಿದು ಪ್ರತಿಭಟನಾ ರ‌್ಯಾಲಿ, ಗಟ್ಟಿ ಸ್ವರದಿಂದ ಘೋಷ ವಾಕ್ಯ ಕೂಗಿಕೊಂಡ ತಮ್ಮ ಶಕ್ತಿಪ್ರದರ್ಶನ ಮಾಡುತ್ತಿದ್ದು ಇದು ಇಸ್ಲಾಮಿನ ಶರೀಅತಿಗೆ ವಿರುದ್ದವಾಗಿದೆ. ಈ ನಿಟ್ಟಿನಲ್ಲಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದರವರು ಭಾರತದ ಸುನ್ನೀ ಮುಸ್ಲಿಮರಿಗೆ ಪುರುಷರಂತೆ ಮಹಿಳೆಯರು ಮುಷ್ಟಿ ಬಿಗಿ ಹಿಡಿದು ರೋಡಿಗಿಳಿಯುವ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಮಹಿಳೆಯರು ಬೀದಿಗಿಳಿಯುವುದರ ವಿರುದ್ದ ಇಕೆ ಸಮಸ್ತದ ನೇತಾರರು ಕೂಡಾ ವಿರೋಧ ವ್ಯಕ್ತಪಿಸಿದ್ದಾರೆClick Me to Share on Whatsapp