Latest News

ಟ್ರಾಫಿಕ್ ಜಾಮ್‌ಗಳನ್ನು ತಡೆಯಲು ಶಾರ್ಜಾ ಸರಕಾರ ‘ದಿ ಸ್ಕೈವೇ ಪ್ರಾಜೆಕ್ಟ್’

User 08/02/2020-12:02:48pm Technology

ಟ್ರಾಫಿಕ್ ಜಾಮ್‌ಗಳನ್ನು ತಡೆಯಲು ಶಾರ್ಜಾ ಸರಕಾರ ‘ದಿ ಸ್ಕೈವೇ ಪ್ರಾಜೆಕ್ಟ್’

ಟ್ರಾಫಿಕ್ ಜಾಮ್‌ಗಳನ್ನು ತಡೆಯಲು ಶಾರ್ಜಾ ಸರಕಾರ ‘ದಿ ಸ್ಕೈವೇ ಪ್ರಾಜೆಕ್ಟ್’ ಎಂಬ ನೇತಾಡುವ ರೈಲ್ವೆ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ. ಶಾರ್ಜಾ ಸರಕಾರದ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ಆಡಳಿತಗಾರ ಡಾ.ಶೇಕ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಸ್ಕೈವೇ ಯೋಜನೆಯ ಪ್ರಾಯೋಗಿಕ ಪರೀಕ್ಷೆಗೆ ಸಾಕ್ಷಿಯಾಗಿದ್ದಾರೆ. ಶಾರ್ಜಾ ಸಂಶೋಧನೆ, ತಂತ್ರಜ್ಞಾನ ಮತ್ತು ಇನ್ನೋವೇಶನ್ ಪಾರ್ಕ್ (ಎಸ್‌ಆರ್‌ಟಿಐಪಿ) ನಲ್ಲಿ ಹ್ಯಾಂಗಿಂಗ್ ಟ್ರ್ಯಾಕ್ ಸಾರಿಗೆ ವ್ಯವಸ್ಥೆಗಾಗಿ ಸ್ಕೈವೇ ಯೋಜನೆಯ ಪ್ರಾಯೋಗಿಕ ಹಂತವನ್ನು ಪ್ರಾರಂಭಿಸಲಾಗಿದೆ. ಡಾ.ಶೇಖ್ ಸುಲ್ತಾನ್ ಅವರು ಎಸ್‌ಆರ್‌ಟಿಐಪಿಗೆ ಭೇಟಿ ನೀಡಿ, ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯೋಜನೆಗೆ ಬಳಸಲಾದ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಎಸ್‌ಆರ್‌ಟಿಐಪಿ ಅಧಿಕಾರಿಗಳು ವಿವರಿಸಿದ್ದಾರೆ.
Click Me to Share on Whatsapp

Related Post